ಕಾಣಿಯೂರು: ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ➤ ಆಸ್ಪತ್ರೆ ಸೀಲ್ ಡೌನ್

(ನ್ಯೂಸ್ ಕಡಬ)newskadaba.com ಕಾಣಿಯೂರು: ಜು. 24, ಕುದ್ಮಾರು ಗ್ರಾಮದ ಯುವಕನೊರ್ವರಲ್ಲಿ ಇತ್ತೀಚೆಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಈತನು ಕಾಣಿಯೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ಬಂದಿರುವ ನಿಟ್ಟಿನಲ್ಲಿ, ಸಂಪರ್ಕ ಹೊಂದಿದ್ದ 7ಮಂದಿಯ ಗಂಟಲ ದ್ರವವನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು.

ಇದೀಗ ಓರ್ವ ವೈದ್ಯರ ವರದಿ ಪಾಸಿಟಿವ್ ಬಂದಿದ್ದು, ಉಳಿದ 6 ಮಂದಿಯ ವರದಿ ನೆಗೆಟಿವ್ ಬಂದಿದೆ. ವೈದ್ಯರ ವರದಿ ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಯನ್ನು ಜು.24ರಂದು ಸೀಲ್‌ಡೌನ್ ಮಾಡಲಾಗಿದೆ.

Also Read  ಸೆ. 22ರಂದು ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

error: Content is protected !!
Scroll to Top