ದಕ್ಷಿಣ ಕನ್ನಡ ಜಿಲ್ಲೆಯ 20 ಪಿಡಿಒಗಳ ವರ್ಗಾವಣೆ ಮಾಡಿದ ರಾಜ್ಯ ಸರಕಾರ ➤ ನಿಮ್ಮ ಪಂಚಾಯತ್ ಪಿಡಿಒ ಯಾರು ಎಂದು ತಿಳಿಯಬೇಕೆ…⁉️

(ನ್ಯೂಸ್ ಕಡಬ) newskadaba.com ಮಂಗಳೂರು: ಜು. 24, ದಕ್ಷಿಣ ಕನ್ನಡ ಜಿಲ್ಲೆಯ 20 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಹಿತ ರಾಜ್ಯದ 114 ಮಂದಿ ಪಿಡಿಒಗಳನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಪಂ ಪಿಡಿಒ ಹರೀಶ್ ಬಂಟ್ವಾಳದ ಪುದು ಗ್ರಾ.ಪಂ.ಗೆ, ಸಂಗಬೆಟ್ಟು ಪಿಡಿಒ ಧರ್ಮರಾಜ್ ಕೊಯ್ಯೂರು ಗ್ರಾ.ಪಂ.ಗೆ, ಕರಿಯಂಗಳ ಪಿಡಿಒ ಪದ್ಮನಾಯಕ್ ಬಂದಾರು ಗ್ರಾ.ಪಂ.ಗೆ, ಅರಳ ಪಿಡಿಒ ಉತ್ತಮ ಚೆನ್ನಪ್ಪಬನಸೂರ್ ಕಣಿಯೂರು ಗ್ರಾ.ಪಂ.ಗೆ, ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾ.ಪಂ. ಪಿಡಿಒ ಸುಧಾಕರ್ ವೇಣೂರು ಗ್ರಾ.ಪಂ.ಗೆ, ಚಾರ್ಮಾಡಿ ಪಿಡಿಒ ಪ್ರಕಾಶ್ ಶೆಟ್ಟಿ ಪಿ.ಎಚ್. ಉಜಿರೆ ಗ್ರಾ.ಪಂ.ಗೆ, ಕಣಿಯೂರು ಪಿಡಿಒ ಗೌರಿಶಂಕರ್ ಮಚ್ಚಿನ ಗ್ರಾ.ಪಂ.ಗೆ, ಕೊಯ್ಯೂರು ಪಿಡಿಒ ರಾಜೀವಿ ಬಳೆಂಜ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದಾರೆ.
ಬೆಳಾಲು ಪಿಡಿಒ ಶ್ರೀಧರ ಹೆಗ್ಡೆ ಕಡಿರುದ್ಯಾವರ ಗ್ರಾಪಂಗೆ, ವೇಣೂರು ಪಿಡಿಒ ವೆಂಕಟರಾಜ ಕೃಷ್ಣ ಲಾಯಿಲ ಗ್ರಾ.ಪಂ.ಗೆ, ಆಳದಂಗಡಿ ಪಿಡಿಒ ಇಮ್ತಿಯಾಝ್ ಕಲ್ಮಂಜ ಗ್ರಾ.ಪಂ.ಗೆ, ಶಿರಾಡಿ ಪಿಡಿಒ ವೆಂಕಟೇಶ್ ಪಿ. ಮಿತ್ತಬಾಗಿಲು ಗ್ರಾ.ಪಂ.ಗೆ, ಕಾಣಿಯೂರು ಪಿಡಿಒ ಯೋಗಿಣಿ ಶೆಟ್ಟಿ ನಾರಾವಿ ಗ್ರಾ.ಪಂ.ಗೆ, ಕೊಯಿಲ ಗ್ರಾ.ಪಂ ಪಿಡಿಒ ನಮಿತಾ ಪುತ್ತೂರು ಗ್ರಾಮ ಪಂಚಾಯತ್ ಗೆ, ಮಂಗಳೂರು ತಾಲೂಕಿನ ಸೂರಿಂಜೆ ಪಿಡಿಒ ರಾಜೇಂದ್ರ ಶೆಟ್ಟಿ ಅಳದಂಗಡಿ ಗ್ರಾ.ಪಂ.ಗೆ,
ತೆಂಕಮಿಜಾರು ಪಿಡಿಒ ಭಾಗ್ಯಲಕ್ಷ್ಮಿ ಅಂಡಿಂಜೆ ಗ್ರಾಪಂಗೆ,
ಬೆಳುವಾಯಿ ಪಿಡಿಒ ಭೀಮನಾಯ್ಕಾ ಬೆಳಾಲು ಗ್ರಾಪಂಗೆ, ಕುಟ್ರುಪಾಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಕಳಿಯಾ ಗ್ರಾಪಂಗೆ, ಗೋಳಿತೊಟ್ಟು ಪಿಡಿಒ ನಯನಾ ಕುಮಾರಿ, ಸಾಲೆತ್ತೂರು ಗ್ರಾಪಂಗೆ. ಎಡಮಂಗಲ ಪಿಡಿಒ ಸರಿತಾ ಜಾಲ್ ಡಿಸೋಜ ಬೆಳ್ಳಾರೆ ಗ್ರಾಪಂಗೆ ವರ್ಗಾವಣೆಗೊಂಡಿದ್ದಾರೆ.

Also Read  ರಾಜ್ಯದಲ್ಲಿಂದು 299 ಮಂದಿಗೆ ಕೋವಿಡ್: ಸಾವಿನ ಸಂಖ್ಯೆ 51ಕ್ಕೆ ಏರಿಕೆ

error: Content is protected !!
Scroll to Top