ಅಂಗಡಿಗೆ ಹೋಗಿದ್ದ ವೇಳೆ ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಎಳೆದು ಯುವಕ ಪರಾರಿ

(ನ್ಯೂಸ್ ಕಡಬ) newskadaba.com ಮೂಲ್ಕಿ: ಜು. 22, ಠಾಣಾ ವ್ಯಾಪ್ತಿಯ ಕಾರ್ನಾಡು ಬಳಿಯ ಚರಂತಿಪೇಟೆ ಎಂಬಲ್ಲಿ ಓರ್ವ ಮಹಿಳೆಯು ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ಅಪರಿಚಿತ ಯುವಕನೋರ್ವ ಆಕೆಯ ಚಿನ್ನದ ಸರ ಸೆಳೆದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.


ಸೀತಾ ಎಂಬಾಕೆ ತನ್ನ ಚಿನ್ನದ ಸರವನ್ನು ಸೆಳೆದುಕೊಂಡವರು. ಇವರು ಚರಂತಿಪೇಟೆಯ ಅಂಗಡಿಯೊಂದರಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ 25ರ ಆಸುಪಾಸಿನ ಯುವಕನೋರ್ವ ಮಹಿಳೆಯ ಗಮನವನ್ನು ಬೇರೆಡೆಗೆ ಸೆಳೆದು ಸಾಮಾಗ್ರಿ ಕಟ್ಟುತ್ತಿದ್ದ ವೇಳೆ ಏಕಾಏಕಿ ಚಿನ್ನದ ಸರ ಸೆಳೆದು ತನ್ನ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಚಿನ್ನದ ಸರವು ಅಂದಾಜು ಎರಡು ಪವನ್ ಮೌಲ್ಯವುಳ್ಳದ್ದಾಗಿದ್ದು, ಮಹಿಳೆಯ ಬೊಬ್ಬೆ ಕೇಳಿ ಸ್ಥಳೀಯರು ಒಟ್ಟು ಸೇರಿದರಾದರೂ ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಮುಲ್ಕಿ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Also Read  ಇಂದಿನಿಂದ ಕಡಬ, ಬೆಳ್ಳಾರೆಯಲ್ಲಿ ಸಂಜೆಯವರೆಗೆ ಅಂಗಡಿಗಳು ಓಪನ್

error: Content is protected !!
Scroll to Top