ಪುತ್ತೂರು ಖಾಸಗಿ ಆಸ್ಪತ್ರೆ ವೈದ್ಯರ ಪತ್ನಿ ಸೇರಿದಂತೆ 3 ಮಂದಿಗೆ ಕೊರೋನಾ ದೃಢ..!!

(ನ್ಯೂಸ್ ಕಡಬ) newskadaba.com ಪುತ್ತೂರು :ಜು.19., ತಾಲೂಕಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಶರವೇಗದಲ್ಲಿ ಹಬ್ಬುತ್ತಿದೆ, ಆದಿತ್ಯವಾರ ಬೆಳಗ್ಗಿನ ಬುಲೆಟಿನ್ ನಲ್ಲೂ ಮೂರು ಹೊಸ ಪ್ರಕರಣಗಳು ವರದಿಯಾಗಿದೆ.

ಈಗಾಗಲೇ ಕೊರೋನಾ ಸೋಂಕು ದೃಢಪಟ್ಟ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಪತ್ನಿ ವೈದ್ಯೆಗೂ ಕೊರೋನಾ ದೃಢ ಸೇರಿದಂತೆ ತಾಲೂಕಿನಲ್ಲಿ ಮೂವರಿಗೆ ಕೊರೋನಾ ಸೊಂಕು ದೃಢಪಟ್ಟಿದೆ.

ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಪ್ರಾಥಮಿಕ ಸಂಪರ್ಕದಿಂದ ಅವರ ಪತ್ನಿ ವೈದ್ಯೆಗೂ ಕೊರೋನಾ ಸೋಂಕು ದೃಢಪಟ್ಟಿದೆ. ನರಿಮೊಗರು ಗ್ರಾಮದ 45 ವರ್ಷದ ಮಹಿಳೆ ಮತ್ತು ಬನ್ನೂರು ಕರ್ಮಲ ನಿವಾಸಿ 48 ವರ್ಷದ ಮಹಿಳೆಗೂ ಕೊರೋನಾ ಸೋಂಕು ದೃಢಪಟ್ಟಿದೆ, ಇದೀಗ ಅವರಿಗೆ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮರ್ ರೈ ತಿಳಿಸಿದ್ದಾರೆ.

error: Content is protected !!
Scroll to Top