ನೆಲ್ಯಾಡಿ: ಸುರಿದ ಭಾರೀ ಮಳೆಗೆ ಮನೆಗೆ ಹಾನಿ



(ನ್ಯೂಸ್ ಕಡಬ)newskadaba.com ನೆಲ್ಯಾಡಿ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ವೃದ್ದರೋರ್ವರ ಮನೆಯ ಹೆಂಚು ಕುಸಿದು ಬಿದ್ದ ಘಟನೆ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿ ನಡೆದಿದೆ.







ಪಟ್ಲಡ್ಕ ನಿವಾಸಿ ಶಂಕರ ಪೂಜಾರಿ ಎಂಬವರ ಮನೆಯ ಹೆಂಚು ಮಳೆಗೆ ಕುಸಿತಗೊಂಡಿದೆ. ಮಣ್ಣಿನ ಗೋಡೆ ಹಾಗೂ ಬಿದಿರಿನಿಂದ ಕೂಡಿದ ಹೆಂಚಿನ ಮನೆ ಇದಾಗಿದ್ದು, ಭಾರೀ ಮಳೆಗೆ ಹಾನಿಯಾಗಿದೆ. ಘಟನೆಯ ವೇಳೆ ಮನೆಯವರೆಲ್ಲರೂ ಮನೆಯ ಮುಂಭಾಗದಲ್ಲಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೀಗ ಟರ್ಪಾಲು ಹಾಕಿ ತಾತ್ಕಾಲಿಕ ಮನೆ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನಾ ಸ್ಥಳಕ್ಕೆ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಕೌಕ್ರಾಡಿ ಗ್ರಾ.ಪಂ. ಮಾಜಿ ಸದಸ್ಯ ಮಹೇಶ್, ಗ್ರಾಮ ಕರಣಿಕ ಮಹೇಶ್, ಗ್ರಾಮ ಸಹಾಯಕ ಕಿರಣ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top