(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ: ಜು.13, ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯು ಸೋಮವಾರ ಬೆಳ್ಳಂಬೆಳಗ್ಗೆ ಆರಂಬಿಸಲಾಗಿದೆ.
ಉಪ್ಪಿನಂಗಡಿ ಪೇಟೆ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಹಲವು ಅನಧಿಕೃತ ಅಂಗಡಿಗಳಿದ್ದು, ಇವುಗಳ ತೆರವಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮೂರು ದಿನಗಳ ಗಡುವು ನೀಡಿತ್ತು. ಜು.13ರಂದು ಬೆಳಗ್ಗೆ ಆರು ಗಂಟೆಯಿಂದ ಎರಡು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯಿತು. ಇಂದು ನಡೆದ ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ. ಇ.ಒ ನವೀನ್ ಭಂಡಾರಿ, ಗ್ರಾ.ಪಂ. ವಿಲ್ಪ್ರೆಡ್ ಲಾರೆನ್ಸ್ ರೊಡ್ರಿಗಸ್ ಭಾಗವಹಿಸಿದ್ದರು.