ಕೊರೊನಾ ಹಾವಳಿ ಸಾರ್ವಜನಿಕರಿಗೆ ಇಲ್ಲ ತಾಲೂಕು ಕಛೇರಿಗೆ ಎಂಟ್ರಿ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.8: ಕೊರೊನಾ ಸೋಂಕು ಯಾರಿಂದ ಯಾವಾಗ ಹರಡುತ್ತದೆ ಎಂಬ ಆತಂಕ ಹೆಚ್ಚಾಗುತ್ತಿದೆ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ.


ಹಾಗಾಗಿ ಸರಕಾರಿ ಕಚೇರಿಗಳಿಗೆ ದಿನಂಪತ್ರಿ ಸಾರ್ವಜನಿಕರು ಬಂದುಹೋಗುವುದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಜುಲೈ 8 ರಿಂದ 10 ರವರೆಗೆ ಮಂಗಳೂರು ಉಪವಿಭಾಗಕ್ಕೆ ಸಂಬಂಧಪಟ್ಟಂತೆ ಮಂಗಳೂರು ಸಹಾಯಕ ಆಯುಕ್ತರ ಕಚೇರಿ, ತಾಲೂಕು ಕಚೇರಿ, ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ವಿಶೇಷ ತಾಲೂಕು ಕಚೇರಿಗಳನ್ನು ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಅಂದು ಸಾರ್ವಜನಿಕರ ಪ್ರವೇಶವನ್ನು ಈ ಕಚೇರಿಗಳಿಗೆ ನಿರ್ಬಂಧಿಸಲಾಗಿದೆ ಎಂದು ಮಂಗಳೂರು ಉಪವಿಭಾಗ ಆಯುಕ್ತರ ಪ್ರಕಟಣೆ ತಿಳಿಸಿದೆ.

Also Read  ಮಳೆ ದುರಂತ ಸ್ಥಳಗಳಿಗೆ ರಾಜಕೀಯ ನಾಯಕರ ಭೇಟಿ ► ಪರಿಹಾರದೊಂದಿಗೆ, ಸರಕಾರಿ ಉದ್ಯೋಗದ ಭರವಸೆ

error: Content is protected !!
Scroll to Top