ಸಾರ್ವಜನಿಕರಿಗಾಗಿ ಸೇವಾ ಸಿಂಧು ಆನ್ ಲೈನ್ ಸೇವೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು. 07, ರಾಷ್ಟ್ರೀಯ ಇ-ಆಡಳಿತ ಹಾಗೂ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶನದಂತೆ ಇ-ಜಿಲ್ಲಾ ಯೋಜನೆಯ ಸೇವಾ ಸಿಂಧು ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ವಿವಿಧ ಇಲಾಖೆಗಳ 451 ಸೇವೆಗಳು ಲಭ್ಯವಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 240 ಸಿ.ಎಸ್.ಸಿ. ಕೇಂದ್ರಗಳಿವೆ. ಕೊರೊನಾ ಅವಧಿಯಲ್ಲಿ ಸಾರ್ವಜನಿಕರು ನೇರವಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಬದಲು ಸೇವಾ ಸಿಂಧು ಆನ್ ಲೈನ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ಸಾರ್ವಜನಿಕರು ಸರಕಾರದ ಸೇವೆಗಳನ್ನು ಸೇವಾಸಿಂಧು ವೆಬ್ ಸೈಟ್ ಮೂಲಕ ಅಥವಾ ಸಮೀಪದ ಸಿ.ಎಸ್.ಸಿ. ಕೇಂದ್ರಗಳಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಸಕಾಲ ಯೋಜನೆಯಡಿ ಬರುವ ಎಲ್ಲಾ ಸೇವೆಗಳು ಸೇವಾಸಿಂಧು ಅಡಿಯಲ್ಲಿ ಲಭ್ಯವಾಗಲಿದೆ. ಸಾರ್ವಜನಿಕರು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಗಳನ್ನು http://www.sakala.kar.nic.in ವೆಬ್ ಸೈಟ್ ಮೂಲಕ ಪರಿಶೀಲಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

Also Read  ರಾಜ್ಯ ಸರ್ಕಾರಿ ನೌಕರರ ಮುಷ್ಕರ ➤ ಹಲವು ಜಿಲ್ಲೆಗಳಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ

error: Content is protected !!
Scroll to Top