ಅನ್ಯ ರಾಜ್ಯದಿಂದ ಬರುವವರಿಗೆ ಮನೆಯಲ್ಲಿಯೇ 14 ದಿನಗಳ ಕ್ವಾರಂಟೈನ್

(ನ್ಯೂಸ್ ಕಡಬ)newskadaba.com ಬೆಂಗಳೂರು: ರಾಜ್ಯ ಸರಕಾರವು ತನ್ನ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಅನ್ಯ ರಾಜ್ಯದಿಂದ ಆಗಮಿಸಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಬದಲು 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಲಾಗಿದೆ.

ರಾಜ್ಯ ಸರಕಾರ ಇಂದು ಈ ಬಗ್ಗೆ ಆದೇಶ ಹೊರಡಿಸಿದೆ. ಈ ಮೊದಲು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು ಏಳು ದಿನದ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕೆಂದು ನಿಯಮವಿತ್ತು. ಆದರೆ ಸದ್ಯ ಈ ನಿಯಮದಲ್ಲಿ ಸರಕಾರ ಬದಲಾವಣೆ ಮಾಡಿದ್ದು, ಹೊರ ರಾಜ್ಯಗಳಿಂದ ಬರುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಿ ಆದೇಶಿಸಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯ ಇರುವವರಿಗೆ ಉತ್ತಮ ಚಿಕಿತ್ಸೆ ನೀಡುವ ಕುರಿತು ಸರ್ಕಾರ ಗಮನವಹಿಸಲಿ, ಅಲ್ಲದೆ, ಹೋಮ್‌ ಕ್ವಾರಂಟೈನ್‌ ಬಗ್ಗೆ ಮನೆಯಲ್ಲಿರುವವರಿಗೆ ಮಾಹಿತಿ ನೀಡುವ ಮೂಲಕ ಹೊರ ರಾಜ್ಯಗಳಿಂದ ಆಗಮಿಸಿದವರಿಗೆ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಲು ಅವಕಾಶ ನೀಡಲಿ ಎಂದು ಆರೋಗ್ಯ ಇಲಾಖೆ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸರಕಾರ ಕ್ವಾರಂಟೈನ್ ನಿಯಮ ಬದಲಾಯಿಸಿ ಆದೇಶ ಹೊರಡಿಸಿದೆ.

Also Read  ಕೊರೋನಾ: ಭಯಬೇಡ, ಎಚ್ಚರವಿರಲಿ ➤ ಪ್ರಯಾಣದ ವೇಳೆ ಮಾಡಬಾಹುದಾದ ಮುಂಜಾಗ್ರತಾ ಕ್ರಮಗಳು

error: Content is protected !!
Scroll to Top