ಡಿ.ಸಿ. ಕಛೇರಿಗೆ ಸಲ್ಲಿಸಿದ ಅರ್ಜಿಯ ಸ್ಥಿತಿಗತಿ ಇಂಟರ್ನೆಟ್ ನಲ್ಲಿ ಲಭ್ಯ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 30, ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೂಡಾ ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಸಂಬಂಧ ಅಪರ ಜಿಲ್ಲಾಧಿಕಾರಿ ರೂಪ ಎಂ.ಜೆ. ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಇ-ಕಚೇರಿ ತಂತ್ರಾಂಶದ ಬಳಕೆಯಿಂದ ಸಾರ್ವಜನಿಕರು ತಮಗೆ ಸಂಬಂಧಿಸಿದ ಅರ್ಜಿ ಅಥವಾ ಕಡತದ ಚಲನವಲನ ಹಾಗೂ ಸ್ಥಿತಿಗತಿಯನ್ನು ಅಂರ್ತಜಾಲದ ಮೂಲಕ ಪರಿಶೀಲಿಸಿಕೊಳ್ಳಬಹುದು. ಇದರಿಂದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ. ಸಾರ್ವಜನಿಕರು ತಾವು ಸಲ್ಲಿಸಿದ ಅರ್ಜಿಯ ಚಲನವಲನ ಹಾಗೂ ಸ್ಥಿತಿಗತಿಯನ್ನು http://eofficedcmo.karnataka.gov.in/ mysdivdcCJ?language=ku ಲಿಂಕ್ ನ್ನು ಬಳಸಿ ತಮ್ಮ ಅರ್ಜಿ ಪ್ರಸ್ತುತ ಹಂತಗಳನ್ನು ನೋಡಿ ಪರಿಶೀಲಿಸಿಕೊಳ್ಳಬಹುದು ಎಂದು ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಮಣಿಪಾಲ: 35 ಅಂತಸ್ತುಗಳ ಕಟ್ಟಡ ಏರಿದ ಜ್ಯೋತಿರಾಜ್.!

error: Content is protected !!
Scroll to Top