ಪುತ್ತೂರು ತಹಶೀಲ್ದಾರ್ ನೇತೃತ್ವದ ಪ್ರವಾಹ ರಕ್ಷಣಾ ತಂಡದ ಗೃಹರಕ್ಷಕರಿಂದ ಶಾಲೆಯ ಮರದ ಗೆಲ್ಲುಗಳ ತೆರವು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜೂ.28, ಇಲ್ಲಿನ ಉಪ್ಪಿನಂಗಡಿ ಮಾದರಿ ಶಾಲೆಯ ಆವರಣದ ಮರದ ಗೆಲ್ಲುಗಳನ್ನು ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡದ ಸದಸ್ಯರು ತೆರವುಗೊಳಿಸಿದರು.

ಮರದ ಗೆಲ್ಲುಗಳ ತೆರವು ಕಾರ್ಯದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮೊಹಿಯುದ್ದೀನ್ ಕುಟ್ಟಿ, ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ, ASL ಜನಾರ್ದನ ಆಚಾರ್ಯ, ವಸಂತ.ಕೆ, ಡೀಕಯ್ಯ ತಾಲೂಕು ಆಡಳಿತದ ಈಜುಗಾರರಾದ ವಿಶ್ವನಾಥ್ ಶೆಟ್ಟಿಗಾರ್, ಸುದರ್ಶನ್ ನೆಕ್ಕಿಲಾಡಿ ಭಾಗವಹಿಸಿದರು.

Also Read  ಮರ್ದಾಳ: ಸಾರಕೆರೆ-ಪೊನೈತ್ತೂರು ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ..!!

error: Content is protected !!
Scroll to Top