ಬೆಳ್ತಂಗಡಿ: ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಒಟಿಪಿ ಪಡೆದು ಹಣ ವಂಚನೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜೂ.27, ಓಟಿಪಿ ನಂಬರ್ ಪಡೆದು ಹಣ ಮಹಿಳೆಯೊಬ್ಬಳನ್ನು ವಂಚಿಸಿರುವ ಘಟನೆ ವೇಣೂರು ಸನಿಹದ ಆರಂಬೋಡಿ ಎಂಬಲ್ಲಿ ನಡೆದಿದೆ.

ಆರಂಬೋಡಿಯ ಇಂದಿರಾ ಪೂಜಾರ್ತಿ ವಂಚನೆಗೊಳಗಾದವರು. ಇವರು ತಮ್ಮ ಖಾತೆಯಿಂದ 10 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇವರ ಪುತ್ರನ ಮೊಬೈಲ್‌ಗೆ +91 8544743846 ಈ ನಂಬರಿನಿಂದ ಕರೆ ಮಾಡಿರುವ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ ಹಾಗೂ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಖಾತೆಯಿಂದ ಸಾಲದ ಹಣವನ್ನು ತೆಗೆಯಲಿದೆ. ಮೊಬೈಲ್‌ಗೆ ಬಂದಿರುವ ಓಟಿಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿ ಹಣವನ್ನು ಲಪಟಾಯಿಸಲಾಗಿದೆ ಎಂದು ತಿಳಿದುಬಂದಿದೆ.

Also Read  ನೀರಿನ ಟ್ಯಾಂಕರ್, ಬೈಕ್ ಮುಖಾಮುಖಿ ಡಿಕ್ಕಿ ➤ ಇಬ್ಬರ ದುರ್ಮರಣ

ಓಟಿಪಿ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಎಟಿಎಂ ಸಂಖ್ಯೆಯನ್ನು ದೂರವಾಣಿ ಕರೆಯಲ್ಲಿ ಯಾರಿಗೂ ತಿಳಿಸದಂತೆ ಬ್ಯಾಂಕ್‌ಗಳು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಮೋಸ ಹೋಗುವವರ ಸಂಖ್ಯೆಯೂ ಕೂಡ ಅದೇ ರೀತಿಯಲ್ಲಿದೆ ಎಂಬುವುದೇ ಖೇದಕರ.

error: Content is protected !!
Scroll to Top