ತಿಂಗಳ ನಂತರ ಬಂಟ್ವಾಳದಲ್ಲಿ ವಕ್ಕರಿಸಿದ ಕೊರೋನಾ ಜನರಲ್ಲಿ ಮತ್ತೆ ಕಾಡಿತು ಆತಂಕ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜೂ. 27, ಕೊರೋನಾ ಮಹಾಮಾರಿ ಮತ್ತೊಮ್ಮೆ ಬಂಟ್ವಾಳ ತಾಲೂಕಿಗೆ ಲಗ್ಗೆ ಇಟ್ಟಿದ್ದು, ತಿಂಗಳ ಬಳಿಕ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದೆ.

ಮೂಲಗಳ ಪ್ರಕಾರ ಅನಂತಾಡಿ, ಪುಣಚ ಹಾಗೂ ಬಿ ಕಸ್ಬಾ ಗ್ರಾಮಗಳಲ್ಲಿ ತಲಾ ಒಂದೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಮೂರು ಮನೆಗಳನ್ನು ಸೀಲ್ ಡೌನ್ ಮಾಡುವ ಪ್ರಕ್ರಿಯೆಗಳು ಆರಂಭಗೊಂಡಿದೆ ಎಂದು ತಿಳಿದು ಬಂದಿದೆ. ಅನಂತಾಡಿ ಗ್ರಾಮದಲ್ಲಿನ ಮಹಿಳೆಗೆ ಯಾವುದೇ ಟ್ರಾವೆಲ್ ಹಿಸ್ಟರಿ, ಲಕ್ಷಣಗಳು ಇಲ್ಲವಾಗಿದ್ದು, ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಬೇರೆ ಚಿಕಿತ್ಸೆಗೆ ದಾಖಲಾದ ಸಂದರ್ಭ ತಪಾಸಣೆಯಲ್ಲಿ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ. ಸದ್ಯಕ್ಕೆ ಅನಂತಾಡಿಯ ಮನೆ ಹಾಗೂ ಮಹಿಳೆ ವಾಸ್ತವ್ಯವಿದ್ದ ಪುತ್ತೂರಿನ ನೆಹರೂ ನಗರ ಸಮೀಪದ ಮನೆಯನ್ನೂ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Also Read  ಲೈಟ್ ಆಫ್ ವಿಚಾರದಲ್ಲಿ ಗಲಾಟೆ   ➤ಕಾರ್ಯದರ್ಶಿಗೆ ಚೂರಿ ಇರಿತ

error: Content is protected !!