ಕಡಬ ತಾಲೂಕಿನ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಮತ್ತು 42 ರಂತೆ ಅವಧಿ ಪೂರ್ಣಗೊಳ್ಳಲಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕಾತಿಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಆದೇಶ ಹೊರಡಿಸಿದ್ದಾರೆ.

ಕಡಬ ತಾಲೂಕಿನ ಗೋಳಿತೊಟ್ಟು, ನೆಲ್ಯಾಡಿ, ಪೆರಾಬೆ, ಐತ್ತೂರು ಗ್ರಾ.ಪಂಗಳಿಗೆ ಪುತ್ತೂರಿನ ಪಶುವೈದ್ಯ ಆಸ್ಪತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಬಿ ಗೌಡ, ಕೊಯಿಲ, ಕೊಣಾಜೆ, ರಾಮಕುಂಜ, ಆಲಂಕಾರು ಗ್ರಾ.ಪಂಗಳಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಹೆಚ್ಚುವರಿ ಮ್ಯಾನೇಜರ್ ಮಸ್ತಾನ್ ಯು, ಎಡಮಂಗಲ, ಬಳ್ಪ, ಸುಬ್ರಹ್ಮಣ್ಯ, ಶಿರಾಡಿ ಗ್ರಾ.ಪಂಗಳಿಗೆ ಸುಳ್ಯ ಕೇಂದ್ರ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ದಾಮೋದರ್, ಬಿಳಿನೆಲೆ, ನೂಜಿಬಾಳ್ತಿಲ, ಮರ್ಧಾಳ, ಕೊಂಬಾರು, ಕೌಕ್ರಾಡಿ ಗ್ರಾ.ಪಂಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಹಕ ಅಭಿಯಂತರರಾದ ಭರತ್ ಬಿ.ಎಂ., ಸವಣೂರು, ಬೆಳಂದೂರು, ಕಾಣಿಯೂರು, ಕುಟ್ರುಪ್ಪಾಡಿ ಗ್ರಾ.ಪಂಗಳಿಗೆ ಸುಳ್ಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಗುರುಮೂರ್ತಿ ಅವರನ್ನು ಪ್ರಭಾರ ಆಡಳಿತಾಧಿಕಾರಿಗಳಾಗಿ ನೇಮಕಾತಿ ಮಾಡಲಾಗಿದೆ.

Also Read  ಕಡಬ: ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

error: Content is protected !!
Scroll to Top