ವಾಹನ ಸಂಚಾರಕ್ಕೆ ಮುಕ್ತವಾದ ಪಡೀಲ್ 2ನೇ ಅಂಡರ್ ಪಾಸ್

(ನ್ಯೂಸ್ ಕಡಬ)newskadaba.com ಮಹಾನಗರ, ಜೂ. 26, ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದ ಪಡೀಲ್‌ ಎರಡನೇ ರೈಲ್ವೇ ಕೆಳ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಗುರುವಾರದಿಂದ ವಾಹನ ಸಂಚಾರಕ್ಕೆ ತೆರೆದುಕೊಂಡಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಗುರುವಾರ ಪಡೀಲ್‌ ರೈಲ್ವೇ ಕೆಳ ಸೇತುವೆಯನ್ನು ಉದ್ಘಾಟಿಸಿದರು.

ರಾ.ಹೆ.75ರ ಪಡೀಲ್‌ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗಿದೆ. ಮಳೆ ನೀರು ಹರಿದು ಹೋಗುವ ಪ್ರದೇಶವಾದ್ದರಿಂದ ನೆಲಮಟ್ಟದಿಂದ ಸುಮಾರು 1.5 ಮೀ.ಎತ್ತರ ಮಣ್ಣು ಹಾಕಿ ರೈಲ್ವೇ ಇಲಾಖೆ ಸೇತುವೆ ಕಾಮಗಾರಿ ನಿರ್ವಹಿಸಿದೆ.

ಆರ್‌ಟಿಒ ನಿಯಮದಂತೆ ಕಂಟೈನರ್‌ ಸಹಿತ ಒಂದು ವಾಹನವು ಗರಿಷ್ಠ 4.8 ಮೀ. ಎತ್ತರವನ್ನು ಮಾತ್ರ ಹೊಂದಿರಬಹುದಾಗಿದೆ ಎಂಬುದು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ. ಪಾದಚಾರಿಗಳಿಗೆ ಸಂಚರಿಸಲು ಅನುವಾಗುವಂತೆ ಹೊಸ ಅಂಡರ್‌ಪಾಸ್‌ನಲ್ಲಿ ಸೌಕರ್ಯವಿದೆ. ಮಳೆ ನೀರು ನಿಲ್ಲದಂತೆ, ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ಚರಂಡಿ ಕಾಮಗಾರಿ ಮಾಡಲಾಗಿದೆ.

Also Read  ವಿಚಾರಣೆಗೆ ಹಾಜರಾಗುವಂತೆ ವಿನಯ್ ಕುಲಕರ್ಣಿ ಆಪ್ತನಿಗೆ ಐಟಿ ಇಲಾಖೆ ನೋಟಿಸ್

ಸುರತ್ಕಲ್‌ನಿಂದ ಬಿಸಿರೋಡ್‌ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿದು ಅನೇಕ ವರ್ಷಗಳೇ ಕಳೆದಿದೆ. ಆದರೆ ಪಡೀಲ್‌ನಲ್ಲಿ ಮಾತ್ರ 2 ರೈಲ್ವೇ ಅಂಡರ್‌ಬ್ರಿಡ್ಜ್ ನಿರ್ಮಾಣ ಕುಂಟುತ್ತಲೇ ಸಾಗಿತ್ತು. ಮೊದಲ ಕೆಳಸೇತುವೆ ಬಾಕ್ಸ್‌ ಪುಶ್ಶಿಂಗ್‌ ತಂತ್ರಜ್ಞಾನದಲ್ಲಿ 2015ರಲ್ಲಿ ಆರಂಭವಾಗಿತ್ತು.

error: Content is protected !!
Scroll to Top