ಹುಷಾರಾಗಿರಿ ನೀರಿನಿಂದಲೂ ಹರಡಬಹುದು ಕೊರೊನಾ!

(ನ್ಯೂಸ್ ಕಡಬ) newskadaba.com.ದೆಹಲಿ,ಜೂ.22:ಕೊರೊನಾ ವೈರಸ್ ವಿರುದ್ದ ಹೋರಾಟ ನಡೆಸುತ್ತಿರುವ ದೇಶಕ್ಕೆ ಇದೀಗ ಮತ್ತೊಂದು ಸುದ್ದಿ ಬರ ಸಿಡಿಳಿನಂತೆ ಬಂದು ಅಪ್ಪಳಿಸಿದೆ. ನೀರಿನ ಮೂಲಕವು ಕೊರೊನಾ ವೈರಸ್ ಹರಡುತ್ತದೆ ಎಂಬ ಸಂಶೋಧನ ವರದಿಯೊಂದು ಹೊರಬಿದ್ದಿದೆ.


ಮಾರಕ ಕೊರೊನಾ ವೈರಸ್‍ಗೆ ಈಗಾಗಲೇ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ತುತ್ತಾಗಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಮೋರಿ ನೀರಿನಲ್ಲೂ ಕೊರೊನಾ ವೈರಸ್ ಸೋಂಕು ಕಂಡುಬಂದಿದೆ ಎಂದು ಐಐಟಿ ಗಾಂಧಿನಗರ, ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ ಮತ್ತು ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಜಂಟಿ ಸಂಶೋಧನೆಯಲ್ಲಿ ಇಂತಹುದೊಂದು ಬೆಚ್ಚಿ ಬೀಳಿಸುವ ಮಾಹಿತಿ ತಿಳಿದುಬಂದಿದೆ.


ಮೇ 8 ಮತ್ತು 27 ರಂದು ಅಹಮದಾಬಾದ್‍ನಲ್ಲಿರುವ ಹಳೆಯ ಪಿರಾನಾ ತ್ಯಾಜ್ಯನೀರಿನ ಸಂಸ್ಕರಣಾ ಘಟಕದಲ್ಲಿನ ನೀರನ್ನು ವಿಜ್ಞಾನಿಗಳು ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಕೊರೊನಾ ವೈರಾಣು ಪತ್ತೆಯಾಗಿದೆ. ಇಲ್ಲಿನ ನೀರು ಮತ್ತು ವೈರಲ್ ಆರ್ಎನ್‍ಎಯ ಆರ್ಟಿ-ಪಿಸಿಆರ್ ವಿಶ್ಲೇಷಣೆ ಮಾಡಲಾಗಿದ್ದು. ಇದರಲ್ಲಿ ವೈರಸ್ ಅಂಶ ಕಂಡುಬಂದಿದೆ. ಈ ಬಗ್ಗೆ ವರದಿ ಮಾಡಿರುವ ವಿಜ್ಞಾನಿಗಳು ಭಾರತದಲ್ಲಿನ ಮೋರಿ ನೀರು ಅಥವಾ ಒಳಚರಂಡಿ ನೀರಿನಲ್ಲಿ ಜೀನ್‍ಗಳು ಕಂಡುಬಂದಿವೆ. ಬಹುಶಃ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಂದ ಬಿಡಲಾಗುತ್ತಿರುವ ತ್ಯಾಜ್ಯದ ನೀರು ಮೋರಿಗೆ ಸೇರುತ್ತಿರುವುದರಿಂದ ಮೋರಿ ನೀರಿನಲ್ಲಿ ಈ ಜೀನ್‍ಗಳು ಕಂಡುಬಂದಿರುವ ಸಾಧ್ಯತೆ ಇದೆ ಎಂದು ಗಾಂಧಿನಗರದ ಭಾರತೀಯ ತಂತ್ರಜ್ಞಾನ ಸಂಸ್ಥೆ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಮನೀಶ್ ಕುಮಾರ್ ಹೇಳಿದ್ದಾರೆ.

Also Read  'ರದ್ದಾದ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಮತ್ತೆ ಜಾರಿಗೆ ತರಬೇಕು'- ಕಂಗನಾ ರಣಾವತ್

error: Content is protected !!
Scroll to Top