ಪ್ಯಾಕೇಜ್ ಬದಲಾವಣೆಗೆ ಹೆದ್ದಾರಿ ಪ್ರಾಧಿಕಾರ ನಿರ್ಧಾರ ➤ವೇಗ ಪಡೆಯಲಿದೆ ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಕಾಮಗಾರಿ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.20:ಕುಂಟತ್ತ ಸಾಗುತ್ತಿರುವ ಬಿ.ಸಿರೋಡ್-ಅಡ್ಡಹೊಳೆ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಂಕ್ರೀಟ್ ಕಾಮಗಾರಿಯ ಗುತ್ತಿಗೆಯನ್ನು ಒಬ್ಬರಿಗೆ ವಹಿಸುವ ಬದಲು ಮೂರು ಹಂತಗಳಾಗಿ ವಿಭಜಿಸಿ ಪ್ರತ್ಯೇಕ ಮೂರು ಟೆಂಡರ್ ಮೂಲಕ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.


ಬಿ.ಸಿ ರೋಡ್‍ನಿಂದ ಅಡ್ಡಹೊಳೆಯವರೆಗಿನ ರಸ್ತೆ ಕಾಮಗಾರಿಯನ್ನು ಎಲ್ ಆ್ಯಂಡ್ ಟಿ ಕಂಪೆನಿ ಮಾತ್ರ ವಹಿಸಿತ್ತು. ಆದರೆ,ಒಂದೇ ಕಂಪೆನಿಗೆ ಈ ಕಾಮಗಾರಿ ನಡೆಸಲು ಕಷ್ಟ ಹಾಗೂ ಅರಣ್ಯ ಇಲಾಖೆ ಸಂಬಂಧಿತ ವಿವಿಧ ಇಲಾಖೆಗಳ ಒಪ್ಪಿಗೆ ಪಡೆಯಲು ಸಮಸ್ಯೆಗಳಿವೆ ಎಂಬ ಏಕ ಪ್ಯಾಕೇಜ್ ಕೈ ಬಿಟ್ಟು ಮೂರು ಪ್ಯಾಕೇಜ್‍ಗಳ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ಈಗ ನಿರ್ಧರಿಸಲಾಗಿದೆ. ಈಗಾಗಲೆ ಎರಡು ಪ್ಯಾಕೇಜ್ ಟೆಂಡರ್ ಪೂರ್ಣಗೊಂಡಿದ್ದು. ಮತ್ತೊಂದು ಪ್ಯಾಕೇಜ್ ಟೆಂಡರ್ ವಾರದೊಳಗೆ ನಿಗದಿಯಾಗುವ ನಿರೀಕ್ಷೆಯಿದೆ.


ಬೆಂಗಳೂರಿನ ನೆಲಮಂಗಳದಿಂದ ಹಾಸನದವರೆಗೆ ಇರುವ ಚತುಷ್ಪದ ರಸ್ತೆಯನ್ನು ಮಂಗಳೂರುವರೆಗೂ ವಿಸ್ತರಿಸುವ ಯೋಜನೆ ಇದಾಗಿದ್ದು.ಶಿರಾಡಿ ಘಾಟ್‍ನಲ್ಲಿ ಎರಡು ಹಂತದಲ್ಲಿ ಕಾಂಕ್ರೀಟ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ ಉಳಿದಂತೆ, ಹಾಸನದಿಂದ ಶಿರಾಡಿಯ ಮಾರ್ನಹಳ್ಳಿಯವರೆಗೆ ಒಟ್ಟು 45 ಕಿ.ಮೀ. ಹಾಗೂ ಶಿರಾಡಿಯ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ಒಟ್ಟು 63 ಕಿ.ಮೀ. ರಸ್ತೆಯು ಚತುಷ್ಪಥಗೊಳ್ಳಲಿದೆ.


ಬಿ.ಸಿ ರೋಡ್-ಅಡ್ಡಹೊಳೆ ನಡುವಿನ ರಾ.ಹೆ ಚತುಷ್ಪಥ ಕಾಂಕ್ರೀಟ್ ಕಾಮಗಾರಿಯನ್ನು ಒಂದು ಪ್ಯಾಕೇಜ್ ಬದಲು ಮೂರು ಪ್ಯಾಕೇಜ್‍ಗಳಾಗಿ ವಿಭಜಿಸಿ ಪ್ರತ್ಯೇಕ ಮೂರು ಟೆಂಡರ್ ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಎರಡು ಟೆಂಡರ್ ಅಂತಿಮವಾಗಿದ್ದುಇನ್ನೊಂದು ಟೆಂಡರ್ ವಾರದೊಳಗೆ ಪೂರ್ಣಗೊಳ್ಳಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group