(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.19:ನಿನ್ನೇ ತಾನೇ ನಡೆದಿದ್ದ ಪಿಯು ಇಂಗೀಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು. ವಿದ್ಯಾರ್ಥಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಯಕಿರಣ ನಾಲ್ಕನೇ ಬ್ಲಾಕ್ನಲ್ಲಿರುವ ಎಕ್ಸಾಂ ಸೆಂಟರ್ನಲ್ಲಿ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಈಕೆಯ ಕೈಗೆ ಸೀಲ್ ಹಾಕಿದ್ದು ಹೋಂ ಕ್ವಾರಂಟೈನ್ನಲ್ಲಿದ್ದಳು ಎಂದು ತಿಳಿದು ಬಂದಿದೆ. ಆದರೆ ಕೈಯಲ್ಲಿದ್ದ ಸೀಲ್ ಅಳಿಸಿಹಾಕಿ ಪರೀಕ್ಷೆ ಬರೆದಿದ್ದು ಈಗ ಆಕೆಯ ಕೋವಿಡ್ ರಿಪೋರ್ಟ್ ಪಾಸಿಟಿವ್ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಎಕ್ಸಾಂ ಸೆಂಟರ್ನಲ್ಲಿದ್ದ ಇತರ ವಿದ್ಯಾರ್ಥಿನಿಯರು, ಶಿಕ್ಷಕರು, ಪರೀಕ್ಷೆ ಮೇಲ್ವಿಚಾರಕರು. ಎಲ್ಲರಲ್ಲೂ ಆತಂಕ ವ್ಯಕ್ತವಾಗಿದೆ.