ಕ್ಷಣಮಾತ್ರದಲ್ಲಿ ತಪ್ಪಿತು ಭಾರೀ ಅನಾಹುತ ➤ ಬೆಳ್ಳಾರೆ ಪೊಲೀಸರ ಸಮಯ ಪ್ರಜ್ಞೆಗೆ ಎಲ್ಲೆಡೆ ಶ್ಲಾಘನೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.19. ಇಲೆಕ್ಟ್ರಿಕಲ್ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದನ್ನು ಗಮನಿಸಿದ ಬೆಳ್ಳಾರೆ ಠಾಣಾ ಪೊಲೀಸರು, ಅಂಗಡಿ ಮಾಲಕರನ್ನು ಕರೆಸಿ ಅನಾಹುತವನ್ನು ತಪ್ಪಿಸಿದ ಘಟನೆ ಗುರುವಾರ ತಡರಾತ್ರಿ ಸವಣೂರಿನಲ್ಲಿ ನಡೆದಿದೆ.

ತಡರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಬೆಳ್ಳಾರೆ ಠಾಣಾ ಎಎಸ್ಐ ಭಾಸ್ಕರ್, ಕಾನ್ಸ್‌ಟೇಬಲ್ ಮಹದೇವ್, ಗೃಹರಕ್ಷಕ ದಳದ ಸಿಬ್ಬಂದಿಗಳಾದ ಹೂವಪ್ಪ ಮತ್ತು ವಸಂತ ಅವರು ಸವಣೂರಿನಲ್ಲಿ ಕಾರ್ಯಾಚರಿಸುತ್ತಿರುವ ದುರ್ಗಾ ಇಲೆಕ್ಟ್ರಿಕಲ್ ನಲ್ಲಿ ಹೊಗೆಯಾಡುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಎಸ್ಐ ಆಂಜನೇಯ ರೆಡ್ಡಿ ಹಾಗೂ ಅಂಗಡಿ ಮಾಲಕರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಾಲಕರು ಅಂಗಡಿ ತೆರೆದು ನೋಡಿದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಯ ಒಳಗಿದ್ದ ಫ್ಯಾನ್ ಸುಟ್ಟು ಕರಕಲಾಗಿ ಇತರ ವಸ್ತುಗಳಿಗೆ ಬೆಂಕಿ ಹಬ್ಬಿತ್ತು. ತಕ್ಷಣವೇ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಯಿತು. ಬೆಳ್ಳಾರೆ ಪೊಲೀಸರ ಸಮಯಪ್ರಜ್ಞೆಗೆ ಇದೀಗ ಶ್ಲಾಘನೆ ವ್ಯಕ್ತವಾಗಿದೆ.

Also Read  ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಕಚೇರಿ ಸ್ಥಳಾಂತರ

error: Content is protected !!
Scroll to Top