ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ರೂ.200 ದಂಡ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ.18, ನಗರದ ಪ್ರಮುಖ ಮಾರುಕಟ್ಟೆ, ಹೋಟೆಲ್‌ಗ‌ಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರ ಮೇಲೆ ಇಂದಿನಿಂದ 200 ರೂ. ದಂಡ ಬೀಳಲಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಮಿನರಲ್‌ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ನವೀನ್‌ ರಾಜ್‌ಸಿಂಗ್‌ ಅವರ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸಭೆ ನಡೆಯಿತು.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ಖಾನ್‌, ನಗರದಲ್ಲಿ ಮಾರುಕಟ್ಟೆ ಹಾಗೂ ಹೋಟೆಲ್‌ಗ‌ಳಲ್ಲಿ ಹೆಚ್ಚು ಜನ ಸೇರುತ್ತಿದ್ದು, ಕೊರೋನಾ ಸೋಂಕು ಹಬ್ಬುವ ಆತಂಕ ಎದುರಾಗಿದ್ದು, ಹೀಗಾಗಿ, ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ತಲಾ 5 ಜನರನ್ನು ಒಳಗೊಂಡ ಮಾರ್ಷಲ್‌ಗ‌ಳ ತಂಡ ಹಾಗೂ ಕಿರಿಯ ಮತ್ತು ಹಿರಿಯ ಆರೋಗ್ಯಾಧಿಕಾರಿಗಳ ಕಣ್ಗಾವಲು ತಂಡ ರಚಿಸಲಾಗಿದೆ ಎಂದರು.

ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದೆ ಇರುವವರ ಮೇಲೆ ತಲಾ 200 ರೂ. ದಂಡ ವಿಧಿಸಲಾಗುವುದು ಹಾಗೂ ಬಿಬಿಎಂಪಿ ಮಾರ್ಗಸೂಚಿ ಅನುಸರಿಸದ ಹೋಟೆಲ್‌, ರೆಸ್ಟೋರೆಂಟ್‌ನ ಮಾಲಿಕರ ಮೇಲೂ ಕ್ರಮ ತೆಗೆದುಕೊಳ್ಳಲು ಸಾಮಾಜಿಕ ಅಂತರ ಕಾರ್ಯಪಡೆಯ ಅಧ್ಯಕ್ಷರಾ ದ ನವೀನ್‌ ರಾಜ್‌ಸಿಂಗ್‌ ಅವರು ನಿರ್ದೇಶನ ನೀಡಿದ್ದಾರೆ.

error: Content is protected !!

Join the Group

Join WhatsApp Group