ಟಿ20: ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ)newskadaba.com ಕರಾಚಿ. ಜೂ. 18, ಕೊರೋನಾ ಹಾವಳಿಯಿಂದ ಸ್ಥಗಿತಗೊಂಡಿದ್ದ ಕ್ರೀಢಾಕೂಟಗಳನ್ನು ನಿರ್ಬಂಧಗಳ ಅನ್ವಯ ನಡೆಸಲು ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಇಂಗ್ಲೆಂಡ್‌ ಪ್ರವಾಸಕ್ಕೆ ಪಾಕ್‌ ಪ್ರಧಾನಿ ಅನುಮತಿ ನೀಡಿದ್ದು, ಈ ತಿಂಗಳ ಅಂತ್ಯದಲ್ಲಿ ಪ್ರಯಾಣ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಪಿಸಿಬಿ ಅಧ್ಯಕ್ಷ ಎಹ್ಸಾನ್‌ ಮಣಿ ಇಸ್ಲಾಮಾಬಾದ್‌ನಲ್ಲಿ ಇಮ್ರಾನ್‌ ಖಾನ್‌ ಭೇಟಿಯಾಗಿ ಕ್ರಿಕೆಟ್‌ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ಆ ಈ ವಿಷಯದ ಕುರಿತಾಗಿ ಅನುಮೋದನೆ ಹೊರಡಿಸಲಾಗಿದೆ. ಕೊರೋನಾ ಹಾವಳಿ ನಡುವೆಯೂ ಕ್ರಿಕೆಟ್‌ ಮತ್ತು ಇತರ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಜನರು ಬಯಸುತ್ತಿರುವುದರಿಂದ ಪಾಕಿಸ್ತಾನ ತಂಡವು ಟೆಸ್ಟ್ ಮತ್ತು ಟಿ- 20 ಸರಣಿಗಾಗಿ ಇಂಗ್ಲೆಂಡ್‌ಗೆ ಹೋಗಬೇಕು ಎಂದು ಪ್ರಧಾನಿ ಮಣಿಗೆ ತಿಳಿಸಿದರು ಎಂದು ಪಿಸಿಬಿ ಮೂಲಗಳು ತಿಳಿಸಿವೆ.

Also Read  ತಾಯಿ ಶವವನ್ನು 13 ವರ್ಷ ಮನೆಯಲ್ಲಿಟ್ಟುಕೊಂಡಿದ್ದ ಮಗ…!!

ಇನ್ನು ಒಟ್ಟು 29 ಆಟಗಾರರು ಮತ್ತು 14 ಅಧಿಕಾರಿಗಳು ಈ ಒಂದು ಪ್ರಯಾಣದಲ್ಲಿ ಭಾಗಿಯಾಗಲಿದ್ದು, ಇಂಗ್ಲೆಂಡ್‌ ತಲುಪಿದ ಬಳಿಕ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುತ್ತಾರೆ. ಆ ಬಳಿಕ ಮೂರು – ನಾಲ್ಕು ವಾರಗಳ ಕಾಲ ಅವರಿಗೆ ಸುರಕ್ಷಿತ ವಾತಾವರಣದಲ್ಲಿ ವಸತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.

error: Content is protected !!
Scroll to Top