ಅಂತರ್ ರಾಷ್ಟ್ರೀಯ ವಿಮಾನಯಾನ ಪುನರಾರಂಭದ ಕುರಿತು ಜುಲೈನಲ್ಲಿ ನಿರ್ಧಾರ ➤ ಕೇಂದ್ರ ಸಚಿವ ಹರ್ ದೀಪ್ ಸಿಂಗ್

(ನ್ಯೂಸ್ ಕಡಬ)newskadaba.com ನವದೆಹಲಿ, ಜೂ.17, ಅಂತರ್ರಾಷ್ಟ್ರೀಯ ವಿಮಾನಯಾನ ಪುನರಾರಂಭದ ಕುರಿತು ಜುಲೈನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ತಿಳಿಸಿದ್ದಾರೆ.

ವಿಮಾನಯಾನ ಕಂಪನಿಗಳನ್ನು ಹಾಗೂ ಪ್ರಯಾಣಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ವಿದೇಶೀ ವಿಮಾನಯಾನ ಪುನರಾರಂಭದ ದಿನಾಂಕವನ್ನು ನಿಗದಿಪಡಿಸಲು ಸಾಧ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಾವು ದೇಶದೊಳಗೆ ಸುಗಮವಾಗಿ ಮತ್ತು ಸ್ಥಿರವಾಗಿ ವಿಮಾನ ಹಾರಾಟ ನಡೆಸುತ್ತಿದ್ದೇವೆ. ಜೂನ್ 15ರವರೆಗೆ 67,718 ಪ್ರಯಾಣಿಕರೊಂದಿಗೆ 730 ವಿಮಾನಗಳು ನಿರ್ಗಮಿಸಿವೆ ಹಾಗೂ 68,236 ಪ್ರಯಾಣಿಕರೊಂದಿಗೆ 734 ವಿಮಾನಗಳು ಆಗಮಿಸಿವೆ’ ಎಂದು ವಿಮಾನ ಯಾನ ಸಚಿವ ಮಾಹಿತಿ ನೀಡಿದ್ದಾರೆ.

Also Read  ಇಂದು AI Summit ನಲ್ಲಿ ಪ್ರಧಾನಿ ಮೋದಿ ಭಾಗಿ; ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯ ಸ್ವಾಗತ

error: Content is protected !!
Scroll to Top