ಉಳ್ಳಾಲ: ಅಲೆಗಳ ಅಬ್ಬರಕ್ಕೆ ಸೋಮೇಶ್ವರದಲ್ಲಿರುವ ಮನೆ ಸಮುದ್ರಪಾಲು ➤ 20 ಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿ

(ನ್ಯೂಸ್ ಕಡಬ)newskadaba.com ಉಳ್ಳಾಲ, ಜೂ.17, ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸಮುದ್ರ ಬೋರ್ಗರೆಯುತ್ತಿದ್ದು, ಸೋಮೇಶ್ವರ ದೇವಸ್ಥಾನದ ಬಳಿ ಭಾಗಶ: ಹಾನಿಗೊಂಡಿದ್ದ ಮನೆಯೊಂದು ಸಂಪೂರ್ಣ ಸಮುದ್ರಪಾಲಾಗಿದ್ದು, ಸಮುದ್ರದ ಅಬ್ಬರಕ್ಕೆ ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.

ಸೋಮೇಶ್ವರ ದೇವಸ್ಥಾನ ಬಳಿಯ ಮೋಹನ್ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಸಮುದ್ರ ಪಾಲಾಗಿದ್ದು, ಕಳೆದ ಬಾರಿ ಸಮುದ್ರ ಕೊರೆತಕ್ಕೆ ಮನೆ ಭಾಗಶ: ಹಾನಿಯಾಗಿತ್ತು. ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ಕಾಮಗಾರಿಯ ಪರಿಣಾಮ, ಸೋಮೇಶ್ವರ ಕಡಲತೀರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಅನೇಕ ತೆಂಗಿನ ಮರ ಸೇರಿದಂತೆ ಸಮುದ್ರ ತೀರ ಪ್ರದೇಶಗಳು ಸಮುದ್ರ ಪಾಲಾಗುತ್ತಿದೆ.

Also Read  ಉಚ್ಚಿಲ ಕಡಲತೀರದಲ್ಲಿ ಮಹಿಳೆ ಮೃತದೇಹ ಪತ್ತೆ

ಉಳ್ಳಾಲದ ಕೈಕೋ, ಖಿಲೇರಿಯಾ ನಗರ, ಸೀಗ್ರೌಂಡ್ ಬಳಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಇಲ್ಲಿ ಶಾಶ್ವತ ಕಾಮಗಾರಿ ಆರಂಭಗೊಂಡಿದೆ. ಈ ಪ್ರದೇಶಗಳಲ್ಲಿ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಸೋಮೇಶ್ವರ ಉಚ್ಚಿಲದಲ್ಲಿಯೂ ಕಡಲ್ಕೊರೆತ ಆರಂಭಗೊಂಡಿದ್ದು, ಕಳೆದ ಬಾರಿ ಉಚ್ಚಿಲ ಬೀಚ್ ಎಂಡ್ ಪಾಯಿಂಟ್ ಸಂಪರ್ಕಿಸುವ ರಸ್ತೆ ಕುಸಿದು ಹೋಗಿತ್ತು. ಇಲ್ಲಿ ಶಾಶ್ವತ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಕಡಲ್ಕೊರೆತ ಹೆಚ್ಚಳಕ್ಕೆ ಕಾರಣವಾಗಿದೆ. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಅಧಿಕ ಮನೆಗಳು ಅಪಾಯದ ಅಂಚಿನಲ್ಲಿದೆ.

error: Content is protected !!
Scroll to Top