ಏಳನೇ ತರಗತಿವರೆಗೆ ಆನ್ ಲೈನ್ ತರಗತಿ ರದ್ದು

(ನ್ಯೂಸ್ ಕಡಬ)newskadaba.com ಜೂ. 12, ಏಳನೇ ತರಗತಿವರೆಗೂ ಆನ್ ಲೈನ್ ತರಗತಿಗಳನ್ನು ರದ್ದುಪಡಿಸಿ ಸರಕಾರ ಆದೇಶ ಹೊರಡಿಸಿದ್ದು, ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಬುಧವಾರದಂದು ನಡೆದ ಸಂಪುಟ ಸಭೆಯಲ್ಲಿ ಎಲ್ಕೆಜಿ, ಯುಕೆಜಿ ಸೇರಿ ಐದನೇ ತರಗತಿವರೆಗಿನ ಆನ್ ಲೈನ್ ತರಗತಿಗಳನ್ನು ರದ್ದುಗೊಳಿಸಿದ ಸರಕಾರ, ಗುರುವಾರದಂದು ಏಳನೇ ತರಗತಿವರೆಗಿನ ಆನ್ ಲೈನ್ ತರಗತಿಗಳನ್ನು ರದ್ದುಪಡಿಸಿದೆ ಎಂದು ಮಾಧುಸ್ವಾಮಿ ವಿಧಾನಸೌದದಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top