ಕೊರೊನಾ ವಾರಿಯರ್ಸ್‍ಗೆ ಪುಷ್ಪ ಪ್ರದರ್ಶನದ ಮೂಲಕ ಗೌರವ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.11:ಕಳೆದ ಮೂರು ತಿಂಗಳಿಂದ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ದ ಹೋರಾಟ ನಡೆಸಿದ ವೈದ್ಯರು, ಪೋಲಿಸರು, ಆರೋಗ್ಯ ಕಾರ್ಯಕರ್ತರು,ಪೌರಕಾರ್ಮಿಕರಿಗೆ ಗೌರವ ಸೂಚಿಸುವ ಸಲುವಾಗಿ ಬೆಂಗಳೂರಿನ ವಿಧಾನಸೌಧದ ಮುಂದೆ ಪುಷ್ಪ ಪ್ರದರ್ಶನ ಆಯೋಜಿಸಿದ್ದಾರೆ.


ರಾಜ್ಯದಲ್ಲಿ ಕೋವಿಡ್-19 ಮಹಾಮಾರಿ ಭಾರೀ ಅನಾಹುತವನ್ನೇ ಉಂಟು ಮಾಡುತ್ತಿದೆ. ಇದರ ವಿರುದ್ದ ಹಗಳು ರಾತ್ರಿ ಎನ್ನದೆ ಹೋರಾಟ ನಡೆಸಿದವರು ಕೊರೊನಾ ವಾರಿಯರ್ಸ್, ವೈದ್ಯರು ತಮ್ಮ ಜೀವವನ್ನು ಪಣಕಿಟ್ಟು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇವರೊಂದಿಗೆ ಮಹಾಮಾರಿ ನಿಯಂತ್ರಣ ಮಾಡಲು ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದರೆ ಪೋಲಿಸರು ರಸ್ತೆಯಲ್ಲಿದ್ದು ಲಾಕ್‍ಡೌನ್ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಇವರೆಲ್ಲರಿಗೂ ಇದೀಗ ಪುಷ್ಪ ಪ್ರದರ್ಶನದ ಮೂಲಕ ಗೌರವ ಸೂಚಿಸಲಾಗುತ್ತಿದೆ.


ಈ ಕಾರ್ಯಕ್ರಮವನ್ನು ಝೀ ವೆಡ್ಡಿಂಗ್ಸ್ ಆಂಡ್ ಈವೆಂಟ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ. ನಗರದ ವಿಧಾನಸೌಧ, ಬ್ರಿಗೇಡ್ ರೋಡ್ ಹಾಗೂ ಫ್ರೇಜರ್ ಟೌನ್‍ನಲ್ಲಿ ಒಟ್ಟು ಮೂರು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ.

error: Content is protected !!

Join the Group

Join WhatsApp Group