(ನ್ಯೂಸ್ ಕಡಬ) newskadaba.com.ಚೆನ್ನೈ,ಜೂ.10: ಮಾರಕ ಕೊರೊನಾ ವೈರಸ್‍ಗೆ ತಮಿಳುನಾಡಿನ ಡಿಎಂಕೆ ಶಾಸಕ ಜೆ.ಅನ್ಬಳಗನ್ ಬಲಿಯಾಗಿದ್ದಾರೆ. ಕಳೆದ ಜೂನ್ 2 ರಂದು ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
61 ವರ್ಷದ ಅನ್ಬಳಗನ್‍ಗೆ ಕೃತಕ ಉಸಿರಾಟದ ಹಾಗೂ ನಿರಂತರ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಕೊರೊನಾಗೆ ಬಲಿಯಾದ ತಮಿಳುನಾಡಿನ ಮೊದಲ ರಾಜಕೀಯ ಮುಖಂಡ ಅನ್ಬಳಗನ್ ಅವರಾಗಿದ್ದಾರೆ. ಇವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಇ. ಪಳನಿಸ್ವಾಮಿ,ಅನ್ಬಳಗನ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.