ಶ್ರೀರಂಗಪಟ್ಟಣ: ಸಾರ್ವಜನಿಕರ ಮೇಲೆ ರಂಪಾಟ ನಡೆಸಿದ ನಟ ‘ಹುಚ್ಚ ವೆಂಕಟ್’

(ನ್ಯೂಸ್ ಕಡಬ)newskadaba.com ಶ್ರೀರಂಗಪಟ್ಟಣ. ಜೂ. 9, ಕಾವೇರಿ ಸಂಗಮ ಬಳಿ ಕಾಣಿಸಿಕೊಂಡ ನಟ ‘ಹುಚ್ಚ ವೆಂಕಟ್’ ರವರು ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ರಂಪಾಟ ನಡೆಸಿದ್ದಾರೆ. ಅಲ್ಲದೇ ‘ಕಾರಿಗೆ ಪೆಟ್ರೋಲ್‌ ಹಾಕಿಸಿಕೊಡಿ, ಅಲ್ಲಿಯವರೆಗೆ ಇಲ್ಲೇ ಠಿಕಾಣಿ ಹೂಡುತ್ತೇನೆ’ ಎಂದೂ ಪಟ್ಟು ಹಿಡಿದಿದ್ದಾರೆ. ಸ್ಥಳೀಯರು ಪೆಟ್ರೋಲ್‌ ತರಿಸಿಕೊಟ್ಟು, ಹಣವನ್ನೂ ನೀಡಿದ್ದಾರೆ. ಆದರೂ ಇವರು ರಹಮತ್‌ಉಲ್ಲಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳೀಯರು ಪೊಲೀಸರನ್ನು ಕರೆಸಿ ಕಳುಹಿಸಿದ್ದಾರೆ.

ಸೋಮವಾರ ಮುಂಜಾನೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಕಾಣಿಸಿಕೊಂಡ ವೆಂಕಟ್‌, ಇಬ್ಬರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಲ್ಲದೇ ಪೊಲೀಸರ ಜತೆ ವಾಗ್ವಾದ ಮಾಡಿ ಅವರಿಂದಲೂ ಹಣ ಪಡೆದಿದ್ದಾರೆ ಎನ್ನಲಾಗಿದೆ.

Also Read  ಕಳೆದ ವರ್ಷ ಅಣ್ಣ ಮೃತಪಟ್ಟ ದಿನವೇ ಈ ವರ್ಷ ತಮ್ಮ ಮೃತ್ಯು..!

error: Content is protected !!
Scroll to Top