ಕೊರೊನಾ ಜೊತೆ ಡೆಂಗ್ಯೂ ಕಾಟ

(ನ್ಯೂಸ್ ಕಡಬ) newskadaba.com.ಕಡಬ,ಜೂ.9:ಕೊರೊನಾ ಕಾಟದ ಮಧ್ಯೆ ಇದೀಗ ಡೆಂಗ್ಯೂ ಜ್ವರ ವಕ್ಕರಿಸಿಕೊಂಡಿದೆ. ಪುತ್ತೂರು ಮತ್ತ ಕಡಬ ತಾಲೂಕಿನಲ್ಲಿ ಜೂನ್ ಮೊದಲ ವಾರದಲ್ಲಿ 53 ಪ್ರಕರಣಗಳು ಕಂಡು ಬಂದಿದೆ.


ಕಡಬ ಪ್ರಾ,ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 1, ಕೊಯಿಲ 2. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 8, ಕೊಳ್ತಿಕೆ ಮತ್ತು ಶಿರಾಡಿಯಲ್ಲಿ 1, ಪಾಣಾಜೆ-31 ಸರ್ವೆ ಮತ್ತು ತಿಂಗಳಾಡಿಯಲ್ಲಿ 3 ಪ್ರಕರಣಗಳು ಕಂಡು ಬಂದಿದೆ.ಜನವರಿಯಿಂದ ಜೂನ್ 7ರ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 258 ಡೆಂಗ್ಯೂ ಜ್ವರ ಪ್ರಕರಣಗಳು ದೃಢಪಟ್ಟಿವೆ. ಮೇ ತಿಂಗಳೊಂದರಲ್ಲಿ 130 ಪ್ರಕರಣಗಳು ಪತ್ತೆ ಯಾಗಿತ್ತು.

Also Read  ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ


ಡೆಂಗ್ಯೂ ಜ್ವರ ಕಂಡುಬಂದಲ್ಲಿಗೆ ಜಿ.ಪಂ. ಅಧ್ಯಕ್ಷರು ಹಾಗೂ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಬೇಕಾದ ಅಗತ್ಯ ಮಾಹಿತಿಗಳನ್ನು ಜನರಿಗೆ ನೀಡಲಾಗಿದೆ. ತಾಲೂಕಿನ ಎಲ್ಲೆಡೆ ಆಶಾಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಅಗತ್ಯ ಔಷಧಗಳು ಕೂಡ ಲಭ್ಯವಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ತಾಲೂಕು ನೊಡಲ್ ಅಧಿಕಾರಿ ಡಾ ಬದ್ರುದ್ದಿನ್ ತಿಳಿಸಿದ್ದಾರೆ.

error: Content is protected !!
Scroll to Top