ಪ್ರವಾಸಿಗರಿಗೆ ಸಿಹಿ ಸುದ್ದಿ ➤ ಮೈಸೂರು ಮೃಗಾಲಯ ಹಾಗೂ ಅರಮನೆ ಪ್ರವೇಶ ಪುನರಾರಂಭ

(ನ್ಯೂಸ್ ಕಡಬ)newskadaba.com ಮೈಸೂರು: ಸೋಮವಾರದಿಂದ ಮೈಸೂರು ಮೃಗಾಲಯವು ಪುನರಾರಂಭಗೊಂಡಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿನಿಂದ ಬಂದ್ ಆಗಿದ್ದ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯವು ಸೋಮವಾರ (ಜೂ.8)ರಂದು ಪುನಾರಂಭಗೊಂಡಿದೆ. ಪ್ರಾಣಿಗಳ ಆಹಾರಕ್ಕೆ ಈವರೆಗೆ 3 ಕೋಟಿ ರೂಪಾಯಿ 4 ಲಕ್ಷ ರೂ ಗಳನ್ನು ದಾನಿಗಳ ನೆರವಿನಿಂದ ಸಂಗ್ರಹ ಮಾಡಲಾಗಿದೆ.

ಅದೇ ರೀತಿ, ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಲಾಕ್ ಡೌನ್ ಕಾರಣದಿಂದ ಪ್ರವೇಶ ನಿಷೇಧಿಸಲಾಗಿತ್ತು. ಅರಮನೆ ಪ್ರವೇಶಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ದಿನಕ್ಕೆ 3500 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎನ್ನಲಾಗಿದೆ.

Also Read  ಸಿದ್ದರಾಮಯ್ಯ ಮತ್ತು ಡಿಕೆಶಿ ನನ್ನ ಎರಡು ಕಣ್ಣುಗಳಿದ್ದ ಹಾಗೆ..!➤ಶಾಸಕ ಪ್ರದೀಪ್ ಈಶ್ವರ್

error: Content is protected !!
Scroll to Top