ತ್ರಾಸಿಯ ವಿವಿಧ ಪ್ರದೇಶಗಳಿಗೆ ಸ್ಯಾನಿಟೈಸ್

(ನ್ಯೂಸ್ ಕಡಬ)newskadaba.com ಜೂ. 8,ಗಂಗೊಳ್ಳಿ:ತ್ರಾಸಿ ಗಾ.ಪಂ.ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ರಾಸಾಯನಿಕ ದ್ರವದ ಸಿಂಪಡಣೆ ಮಾಡುವ ಮೂಲಕ ಕೋವಿಡ್ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.


ತ್ರಾಸಿಯ ವಿವಿಧ ಶಾಲೆಗಳಲ್ಲಿ ಹೊರ ರಾಜ್ಯದಿಂದ ಬಂದಿರುವವರು ಕ್ವಾರಂಟೈನ್‍ನಲ್ಲಿ ಇದ್ದುದರಿಂದ ಶಾಲೆಗಳನ್ನು, ತ್ರಾಸಿ ಬಸ್ ನಿಲ್ದಾಣ, ರಿಕ್ಷಾ, ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳನ್ನು ರಾಸಾಯನಿಕ ದ್ರವದ ಸಿಂಪಡಣೆ ಮಾಡುವ ಮೂಲಕ ಕುಂದಾಪುರ ಅಗ್ನಿಶಾಮದ ದಳದ ಸಿಬ್ಬಂದಿ ಸ್ಯಾನಿಟೈಸ್ ಮಾಡಿದರು.

ಕ್ವಾರಂಟೈನ್ ಸಂದರ್ಭ ಹಲವು ಜನರು ಈ ಶಾಲೆಯಲ್ಲಿ ಇದ್ದರೂ ಈಗ ಎಲ್ಲರೂ ಕ್ವಾರಂಟೈನ್ ಮುಗಿಸಿ ತೆರಳಿದ್ದರೂ ಆದರೆ ನಂತರ ಶಾಲೆಗಳನ್ನು ಸ್ಯಾನಿಟೈಸ್ ಮಾಡಿರಳಿಲ್ಲ ಆ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಶಾಲೆ, ಸಾರ್ವಜನಿಕ ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಆಲಂಕಾರು: ಕುಳಿತ ಸ್ಥಿತಿಯಲ್ಲೇ ಭದ್ರತಾ ಸಿಬ್ಬಂದಿ ಮೃತ್ಯು...!!

error: Content is protected !!
Scroll to Top