ಮಂಗಳೂರು: ಜೂ. 8 ರಿಂದ ಫೋರಂ ಮಾಲ್ ಪುನರಾರಂಭ

(ನ್ಯೂಸ್ ಕಡಬ)newskadaba.com ಮಂಗಳೂರು. ಜೂ. 6, ಕೊರೋನಾ ಭೀತಿಯ ಕಾರಣದಿಂದ ಎರಡು ತಿಂಗಳುಗಳಿಂದ ಬಂದ್‌ ಆಗಿದ್ದ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫೋರಂ ಮಾಲ್‌ ಜೂನ್‌.8 ರಿಂದ ಪುನಾರರಂಭಗೊಳ್ಳಲಿದೆ ಎಂದು ಮಾಲ್‌ ಮ್ಯಾನೇಜರ್‌ ಅರವಿಂದ ಶ್ರೀ ವಾಸ್ತವ ಹೇಳಿದ್ದಾರೆ.

ಗ್ರಾಹಕರ ಅನುಕೂಲದ ಹಿನ್ನೆಲೆಯಲ್ಲಿ ಅವರ ಕೈ ತಗಲುವ ಹಲವು ಟಚ್‌ ಪಾಯಿಂಟ್‌ಗಳೊಂದಿಗೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಹಲವು ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು. ಮುಖಕ್ಕೆ ಮಾಸ್ಕ್‌, ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ ಬಳಸುವುದು ಕಡ್ಡಾಯವಾಗಿದೆ. ಮಾಲ್ ಪ್ರವೇಶಿಸುವ ಮುನ್ನ ಗ್ರಾಹಕರನ್ನು ಥರ್ಮಲ್‌ ಸ್ಕ್ಯಾ‌ನಿಂಗ್‌ ಗೆ ಒಳಪಡಿಸಲಾಗುವುದು. ಜತೆಯಲ್ಲಿ ಅವರಲ್ಲಿ ಆರೋಗ್ಯ ಸೇತು ಆ್ಯಪ್‌ ಇದೆಯೇ ಎಂದು ಖಚಿತ ಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Also Read  ಉಡುಪಿ: ಟ್ರಕ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ➤ ಸವಾರ ಮೃತ್ಯು

ಒಟ್ಟು ಪ್ರವೇಶದ ಮೂರನೇ ಒಂದರಷ್ಟು ಜನರಿಗೆ ಮಾತ್ರವೇ ಪ್ರವೇಶ ದೊರೆಯಲಿದೆ. ಗ್ರಾಹಕರು ವೆಬ್‌ ಸೈಟ್‌ಗೆ ಹೋಗಿ ಪಾಸ್‌ ಪಡೆದು ಕ್ಯು ಆರ್‌ ಕೋಡ್‌ ಇರುವ ಸಮಯವನ್ನು ನಿಗದಿಮಾಡಿಕೊಂಡು ಒಳಗೆ ಹೊರಗೆ ಹೋಗುವ ವ್ಯವಸ್ಥೆ ಇದೆ. ಇದು ಜೂ.8ರಿಂದ ಕಾರ್ಯಾರಂಭಿಸಲಿದೆ ಎಂದು ತಿಳಿಸಿದ್ದಾರೆ.

ಲಿಫ್ಟ್‌ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡಲು ಗ್ರಾಹಕ ನಿಲ್ಲುವ ಜಾಗಕ್ಕೆ ಮಾರ್ಕ್ ಮಾಡಲಾಗಿದೆ. ಕ್ಯಾಶ್‌ ಕೌಂಟರ್‌, ಕೈ ತಗಲುವ ಎಕ್ಸ್‌ಲೇಟರ್‌, ಕಾರ್ಡ್‌ ಸ್ವೈಪಿಂಗ್‌ ಮಿಶಿನ್‌, ಕುಳಿತುಕೊಳ್ಳುವ ಜಾಗಗಳು, ಸಾಮಾಜಿಕ ಕೈ ಚೀಲಗಳು, ಟ್ರಾಲಿಗಳು ಮೊದಲಾದವುಗಳನ್ನು ಪ್ರತಿ ಅಂಗಡಿಗಳು ಸ್ಯಾನಿಟೈಸ್‌ ಮಾಡಲಿವೆ ಎಂದಿದ್ದಾರೆ. ಒಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯಂತೆ ಗ್ರಾಹಕರ ಸುರಕ್ಷತೆಗೆ ಪ್ರಮುಖ ಅದ್ಯತೆ ನೀಡಿ ಫೋರಂ ಮಾಲ್‌ ಪುನರಾರಂಭಗೊಳ್ಳಲಿದೆ ಎಂದು ಮಾರುಕಟ್ಟೆ ಮ್ಯಾನೇಜರ್‌ ಸುನಿಲ್‌ ತಿಳಿಸಿದ್ದಾರೆ.

Also Read  ಕಡಬ: ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಇನೋವಾ ಕಾರು ನಡುವೆ ಢಿಕ್ಕಿ ➤ ಪವಾಡಸದೃಶ ಪಾರಾದ ಪ್ರಯಾಣಿಕರು

error: Content is protected !!
Scroll to Top