ಅಪ್ರಾಪ್ತ ಸಹೋದರಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ➤ ಇಬ್ಬರ ಅರೆಸ್ಟ್

(ನ್ಯೂಸ್ ಕಡಬ) newskadaba.com ಜೈಪುರ. ಜೂ. 4, ರಾಜಸ್ಥಾನದ ಬರ್ಮರ್‌ ಪ್ರದೇಶದ ಶಾಸ್ತ್ರಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಇಬ್ಬರು ಅತ್ಯಾಚಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಲ್ಲಿನ ಪೊಲೀಸ್‌ ಅಧಿಕಾರಿಯೋರ್ವರು ‘ಬರ್ಮರ್‌ನ ಶಾಸ್ತ್ರಿ ನಗರದಲ್ಲಿ ಒಂದು ವರ್ಷದಿಂದ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ, ಈ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ. ಇಂತಹ ಅಮಾನವೀಯ ಕೃತ್ಯವೆಸಗಲು ಆರೋಪಿಗಳಿಗೆ ಸಹಾಯ ಮಾಡಿದ ಕಾರಣದಿಂದಾಗಿ ಇಬ್ಬರು ಮಹಿಳೆಯರ ಮೇಲೆಯೂ ಕೇಸು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Also Read  ಐಪಿಎಲ್ ಮಾದರಿಯಲ್ಲಿ ವಾಲಿಬಾಲ್ ಲೀಗ್ ಪ್ರಾರಂಭ ➤ ದಾಖಲೆಯ 15 ಲಕ್ಷ ರೂ. ಮೊತ್ತಕ್ಕೆ ಕೊಲ್ಕತ್ತಾ ತಂಡಕ್ಕೆ ಹರಾಜಾದ ಬೆಳ್ತಂಗಡಿಯ ಅಶ್ವಲ್ ರೈ..!

error: Content is protected !!
Scroll to Top