ಜೂ.5 ಮತ್ತು 6 ರಂದು ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ಜೂನ್‌ 5 ಮತ್ತು 6ರ ಮಧ್ಯರಾತ್ರಿ ಚಂದ್ರಗ್ರಹಣ ಸಂಭವಿಸಲಿದ್ದು, ಆಕಾಶಕಾಯಗಳ ನಡುವೆ ಅದ್ಭುತ ವಿದ್ಯಮಾನ ನಡೆಯಲಿದೆ. ಜೂನ್ 5ರಂದು ಹುಣ್ಣಿಮೆ ಇದ್ದು, ಅಂದು ರಾತ್ರಿ 11.15ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಿ ಜೂನ್‌ 6ರ ನಸುಕಿನ 2.45ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣವು ದೇಶದ ಎಲ್ಲ ಭಾಗಗಳಲ್ಲಿ ಕಾಣಲಿದ್ದು, ಉತ್ತರ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಗೋಚರವಾಗಲಿದೆ. ಗ್ರಹಣದ ಸಮಯದಲ್ಲಿ ಚಂದ್ರನ ಮೇಲೆ ಯಾವುದೇ ರೀತಿಯ ಕತ್ತಲು ಆವರಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಸ್.ಟಿ. ಸ್ವಾಮಿ ತಿಳಿಸಿದ್ದಾರೆ.

ಗ್ರಹಣದಿಂದ ಚಂದ್ರನು ಸ್ವಲ್ಪ ಮಸುಕಾಗಿ ಕಾಣಿಸಿಕೊಳ್ಳುವನೇ ಹೊರತು, ಆಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹಾಗಂತ ಇದು ಸಂಪೂರ್ಣ ಚಂದ್ರ ಗ್ರಹಣವಲ್ಲ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬರಲಿದ್ದು, ಈ ಮೂರು ಆಕಾಶಕಾಯಗಳು ಒಂದೇ ಸಮತಳದಲ್ಲಿರುವುದಿಲ್ಲ. ಸೂರ್ಯ ದೂರ ಸರಿಯುವುದರಿಂದ ಚಂದ್ರನ ಮೇಲೆ ಭೂಮಿಯ ನೆರಳು ಉಂಟಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

Also Read  ಮಾಜಿ ಫುಟ್ ಬಾಲ್ ಆಟಗಾರ ಡಿಗೊ ಮರುಡೋನಾ ನಿಧನ

error: Content is protected !!