ಕೋವಿಡ್ 19 ಕೇಸ್ ➤ ಜಾಗತಿಕವಾಗಿ 7ನೇ ಸ್ಥಾನದತ್ತ ಭಾರತ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 1 : ಕೊರೋನಾ , ಕೋವಿಡ್ 19 ಕೇಸ್ಗಳ ಪ್ರಮಾಣ ದಿನೇದಿನದೆ ಹೆಚ್ಚಿತ್ತಿರುವ ಕಾರಣ ಭಾರತ ಜಾಗತಿಕ ಮಟ್ಟದಲ್ಲೂ ಟಾಪ್ 10 ಪಟ್ಟಿಯಲ್ಲಿ ಮೇಲೇರುತ್ತಿದೆ. ನಿನ್ನೆ 8 ಸ್ಥಾನದಲ್ಲಿದ್ದ ಭಾರತ ಇಂದು 7 ನೇ ಸ್ಥಾನಕ್ಕೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೊರೋನಾ ವೈರಸ್ ಟ್ರ್ಯಾಕರ್ನ ಪ್ರಕಾರ ಭಾರತದಲ್ಲಿ 1,82,143 ಕೋವಿಡ್ ಪ್ರಕರಣ ದೃಢಪಟ್ಟಿದೆ. ಭಾನುವಾರ ರಾತ್ರಿ 10.30ರ ಡೇಟಾ ಪ್ರಕಾರ ಜಾಗತಿಕವಾಗಿ ಒಟ್ಟು 59,34,936 ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಭಾರತದಲ್ಲಿ ಇದುವರೆಗಿನ ಗರಿಷ್ಠ ಏಕದಿನ ಏರಿಕೆ ಸಂಭವಿಸಿದ್ದು ಭಾನುವಾರ 8,380 ಹೊಸ ಕೇಸ್ಗಳು 24 ಗಂಟೆ ಅವಧಿಯಲ್ಲಿ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,164 ಆಗಿದೆ. 89,995 ಸಕ್ರಿಯ ಕೇಸ್ಗಳಿದ್ದು, 86,983 ಕೇಸ್ಗಳಲ್ಲಿ ರೋಗಿಗಳು ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಒಬ್ಬ ರೋಗಿ ಮಾತ್ರ ಹೊರದೇಶದ ವಲಸಿಗ. ಇದರೊಂದಿಗೆ ರಿಕವರಿ ರೇಟ್ ಶೇಕಡ 47.76 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾ ಹೇಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕರೊನಾ ಟ್ರ್ಯಾಕರ್ ಪ್ರಕಾರ ಭಾರತ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದೆ. ಎಂದು ಮೂಲಗಳು ವರದಿ ಮಾಡಿವೆ.

Also Read  ಉಡುಪಿಗೆ ತಟ್ಟದ ಸಾರಿಗೆ ನೌಕರರ ಬಿಸಿ ➤ ಎಂದಿನಂತೆ ಬಸ್ ಸಂಚಾರ

 

error: Content is protected !!
Scroll to Top