ಕಡಬ, ಬೆಳ್ತಂಗಡಿ ತಲುಪಿದೆ ಮಿಡತೆ ಹಿಂಡು ➤ ಆತಂಕದಲ್ಲಿ ಕೃಷಿಕರು

(ನ್ಯೂಸ್ ಕಡಬ) newskadaba.com ಕಡಬ, ಮೇ.30. ದೇಶಾದ್ಯಂತ ರೈತರನ್ನು ಚಿಂತೆಗೀಡಾಗುವಂತೆ ಮಾಡಿದ್ದ ಮಿಡತೆ ಹಾವಳಿಯು ರಾಜ್ಯಕ್ಕೆ ಕಾಲಿಟ್ಟಿದ್ದು, ಇದೀಗ ಕಡಬ ಪರಿಸರದಲ್ಲೂ ಕಂಡುಬಂದಿದೆ.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಿಡತೆ ಹಾವಳಿ ಆರಂಭಗೊಂಡಿದ್ದು, ರೈತರನ್ನು ಕಂಗೆಡಿಸಿದೆ. ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿ ಆನಂದ ಏರಾ ಎಂಬವರ ತೋಟದಲ್ಲಿ ಮಿಡತೆಗಳ ಗುಂಪು ಕಂಡುಬಂದಿದೆ. ಗುಂಪು, ಗುಂಪಾಗಿ ಆಗಮಿಸುವ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ. ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಈ ಮಿಡತೆಗಳ ಗುಂಪು ಕಾಣಸಿಗುತ್ತಿದ್ದು, ಪರಿಸರವಾಸಿಗಳನ್ನು ಆತಂಕಕ್ಕೀಡುಮಾಡಿದೆ. ಅಲ್ಲದೆ ಬೆಳ್ತಂಗಡಿ ತಾಲೂಕಿನಲ್ಲೂ ಮಿಡತೆ ಹಾವಳಿ ಕಂಡುಬಂದಿದ್ದು, ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಅನೀಶ್ ಎಂಬವರ ತೋಟದಲ್ಲಿಯೂ ಮಿಡತೆಗಳ ರಾಶಿ ಕಂಡುಬಂದಿದೆ.

Also Read  ಮಂಗಳೂರು: ದಿಶಾರವಿ ಬಂಧನದ ವಿರುದ್ದ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ ➤ ಫ್ಯಾಶಿಷ್ಟರ ವಿರುದ್ದ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ ನಿರಂತರ- ಸರ್ಫರಾಝ್ ಗಂಗಾವತಿ

error: Content is protected !!
Scroll to Top