ನಿಂದಿಸಿದ್ದಕ್ಕೆ ಆಸಿಡ್‌ ದಾಳಿ ➤ ಆರೋಪಿ ಪೋಲಿಸರ ವಶಕ್ಕೆ



(ನ್ಯೂಸ್ ಕಡಬ)newskadaba.com ಮೈಸೂರು ,ಮೇ.29:  ನಿಂದಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಿಳಿಕೆರೆಯ ನಿವಾಸಿ ಕಾಳಪ್ಪ ನಾಯಕ್(35) ಆಸಿಡ್ ದಾಳಿಗೆ ಒಳಗಾದವರು. ಆಸಿಡ್ ದಾಳಿಯಿಂದ ಮುಖದ ಬಲ ಭಾಗ, ಕಿವಿ ಹಾಗೂ ಬೆನ್ನಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.





 

 

ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆಸಿಡ್ ದಾಳಿ ನಡೆಸಿದ ಬಿಳಿಕೆರೆಯ ಚಂದ್ರಶೇಖರಾಚಾರಿ(40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಾಳಪ್ಪ ನಾಯಕ ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ಚಂದ್ರಶೇಖರಾಚಾರಿ ಆಸಿಡ್ ದಾಳಿ ನಡೆಸಿದ್ದು, ಕಾಳಪ್ಪನಾಯಕನ ಮುಖದ ಬಲ ಭಾಗ, ಕಿವಿ ಹಾಗೂ ಬೆನ್ನಿನಲ್ಲಿ ಗಾಯವಾಗಿದೆ.ಬಿಳಿಕೆರೆ ಪೊಲೀಸ್ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.






 

 

error: Content is protected !!
Scroll to Top