ಕೋವಿಡ್‌ಗೆ ಕರಾವಳಿ ತತ್ತರ >>ದ.ಕ. ಜಿಲ್ಲೆಯ 24, ಉಡುಪಿಯ 29 ಮಂದಿಗೆ ಸೋಂಕು ದೃಢ

ಮಂಗಳೂರು, ಮೇ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಮಂದಿ ಹಾಗೂ ಉಡುಪಿಯ 29 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.

ದ.ಕ. ಜಿಲ್ಲೆಯ 24 ಮಂದಿಯೂ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿ ಇರುವವರಾಗಿದ್ದಾರೆ. ಇವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ 97 ಪ್ರಕರಣಗಳ ಪೈಕಿ 37 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅದರಲ್ಲೂ 12 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 63 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಓರ್ವ ಸೋಂಕಿತ ಸೋಂಕು ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ ಇಂದು 29 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 149ಕ್ಕೇರಿಕೆಯಾಗಿದೆ.

Also Read  ಬಂದರಿನಲ್ಲಿ ಮೀನುಗಾರರ ಮಧ್ಯೆ ಗಲಾಟೆ ➤ ಪೊಲೀಸರಿಂದ ಲಾಠಿ ಚಾರ್ಜ್..!

ಸೋಂಕಿತರಲ್ಲಿ 26 ಮಂದಿ ಮಹಾರಾಷ್ಟ್ರದಿಂದ, ಇಬ್ಬರು ತೆಲಂಗಾಣದಿಂದ, ಓರ್ವ ಕೇರಳದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿ ಇರುವವರಾಗಿದ್ದಾರೆ. ಇವರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ 149 ಸೋಂಕಿತರ ಪೈಕಿ ಮೂವರು ಗುಣಮುಖರಾಗಿದ್ದು, ಉಳಿದ 146 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!
Scroll to Top