(ನ್ಯೂಸ್ ಕಡಬ) newskadaba.com ಮಂಗಳೂರು/ಉಡುಪಿ,ಮೇ.28: ಮಂಗಳೂರು.ಉಡುಪಿ: ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ.1ರಿಂದ ಕೋರ್ಟ್ ಕಲಾಪ ಆರಂಭಿಸಬಹುದೆಂದು ಹೈಕೋರ್ಟ್ ತಿಳಿಸಿದ್ದರಿಂದ ಮಂಗಳೂರು ಮತ್ತು ಉಡುಪಿ ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ. 1ರಿಂದ ಪುನರಾರಂಭ ಮಾಡುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ.
ಮಂಗಳೂರು ನ್ಯಾಯಾಲಯ ಕಟ್ಟಡ ಸಂಕೀರ್ಣದಲ್ಲಿ 27 ನ್ಯಾಯಾಲಯಗಳಿದ್ದು, ಕೋವಿಡ್ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಒಂದು ಬಾರಿ ಸ್ಯಾನಿಟೈಸೇಶನ್ ಮಾಡಿಸಲಾಗಿದೆ. ಜೂನ್ 1ರ ಮೊದಲು ಅಥವಾ ಆನಂತರ ಪುನಃ ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ.
ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ಹತ್ತು ನ್ಯಾಯಾಲಯಗಳಿದ್ದು ಈಗಾಗಲೇ ಒಂದು ಬಾರಿ ಸ್ಯಾನಿಟೈಸೇಶನ್ ಮಾಡಲಾಗಿದೆ. ಮುಂದೆ ವಾರಕ್ಕೊಮ್ಮೆ ನ್ಯಾಯಾಲಯ ಆವರಣದೊಳಗೆ ಸ್ಯಾನಿಟೈಸೇಶನ್ ಮಾಡಲಾಗುತ್ತದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಒಳಗೆ ಕಕ್ಷಿದಾರರ ಪ್ರತಿನಿಧಿಗಳಾಗಿ ವಕೀಲರು ಮಾತ್ರ ಹಾಜರಾಗಲು ಅವಕಾಶ. ಸಾರ್ವಜನಿಕರಿಗೆ ಪ್ರವೇಶಾವಕಾಶವಿಲ್ಲ.ಎಂದು ನಿಯಮಗಳನ್ನ ಮಾಡಲಾಗಿದೆ.