(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.02. ರಿಲಯನ್ಸ್ ಜಿಯೋ ಹೊಸ ಹೊಸ ಆಫರ್ ಗಳನ್ನು ಬಿಡುಗಡೆಗೊಳಿಸುತ್ತಿರುವುದರ ಮಧ್ಯೆ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ ಟೆಲ್ ಭರ್ಜರಿ ಆಫರ್ ಗಳನ್ನು ಪರಿಚಯಿಸಿದೆ.
399 ರೂ. ರೀ ಚಾರ್ಜ್ ಪ್ಯಾಕ್ ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆಯನ್ನೂ ದಿನಕ್ಕೆ 1 ಜಿ.ಬಿ. ಡೇಟಾವನ್ನು 84 ದಿನಗಳ ಅವಧಿಗೆ 4 ಜಿ ವೇಗದಲ್ಲಿ ನೀಡಲಿದೆ. ಈ ಆಫರ್ ರಿಲಯನ್ಸ್ ಜಿಯೊ 399 ಯೋಜನೆಯನ್ನು ಹೋಲುತ್ತದೆ. ಜಿಯೊ ಎರಡು ಹೊಸ ಯೋಜನೆಗಳನ್ನು(399 ರೂ. ಮತ್ತು 349 ರೂ.) ಜುಲೈನಲ್ಲಿ ಆರಂಭಿಸಿದೆ. ಜಿಯೊ ರೀಚಾರ್ಜ್ ಪ್ಯಾಕ್ ಗಳನ್ನು ಎದುರಿಸಲು ಏರ್ ಟೆಲ್ ಕೂಡಾ ಕೆಲವು ಯೋಜನೆಗಳನ್ನು ಪ್ರಾರಂಭಿಸಿದೆ. ಏರ್ ಟೆಲ್ 5 ರೂ. ನಿಂದ 399 ರೂ.ವರೆಗಿನ ಕೆಲವು ಯೋಜನೆಗಳನ್ನು ಆರಂಭಿಸಿದೆ.
4G ಸಿಮ್ ಅಪ್ ಗ್ರೇಡೇಷನ್ ಮತ್ತು ಏಕಕಾಲದ ರೀಚಾರ್ಜ್ ನಲ್ಲಿ ಆಯ್ದ ಕೆಲವು ಗ್ರಾಹಕರಿಗೆ 5 ರೂಪಾಯಿಗೆ 7 ದಿನಗಳ ಕಾಲ 4 ಜಿಬಿ 3 ಜಿ / 4 ಜಿ ಡೇಟಾವನ್ನು ಪರಿಚಯಿಸಿದೆ. 349 ರೂ. ಪ್ಲಾನ್: ಎಲ್ಲಾ ಹ್ಯಾಂಡ್ ಸೆಟ್ ಗಳಿಗೆ 28 ದಿನಗಳವರೆಗೆ 28 ಜಿಬಿ ಡೇಟಾ (1 ಜಿಬಿ / ದಿನ) ಜೊತೆಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್.ಟಿ.ಡಿ. ಕರೆಗಳು.
349 ರೂ. ಪ್ಲಾನ್: ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವ ಮೂಲಕ ಶೇ. 10 ರಷ್ಟು ಕ್ಯಾಶ್ ಬ್ಯಾಕ್ ಸೌಲಭ್ಯ ಪಡೆಯಬಹುದು.