ಮೇ 31ಕ್ಕೆ ಲಾಕ್ ಡೌನ್ ಅಂತ್ಯ ಡೌಟ್ ➤ ಜೂನ್ 15ರವರೆಗೂ ವಿಸ್ತರಣೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ26: ಕರ್ನಾಟಕದಲ್ಲಿ ಕೊವೀಡ್ 19 ಅರ್ಭಟ ಮುಂದುವರಿದಿದೆ. ಹೀಗಿರುವಾಗ ಮೇ 31ಕ್ಕೆ ಲಾಕ್ ಡೌನ್ ಅಂತ್ಯವಾಗುತ್ತಾ? ಅಥವಾ ಮತ್ತೆ ಮುಂದುವರಿಯುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ.
ತಿಂಗಳ ಹಿಂದೆ ವಿಶ್ವದ ಪಟ್ಟಿಯಲ್ಲಿ ಬಹಳ ಹಿಂದೆಯಿದ್ದ ಭಾರತ ನೋಡನೋಡುತ್ತಿದ್ದಂತೆಯೇ ಟಾಪ್ 10 ರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

 

 

 

ಚೀನಾ, ಆಮೇರಿಕಕ್ಕೆ ಪೈಪೋಟಿ ನೀಡುವಷ್ಟು ವೇಗದಲ್ಲಿ ಹೊಸ ಹೊಸ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇದರಿಂದ ಹೆಚ್ಚಿನ ಆತಂಕ ಉಂಟಾಗಿದೆ. ಇನ್ನು ಮಾರ್ಚ್ 4ನೇ ವಾರದಿಂದ ನಿರಂತರವಾಗಿ ಲಾಕ್‍ಡೌನ್ ಮುಂದುವರಿದಿದೆ. ಸತತವಾಗಿ 4ಬಾರಿ ಲಾಕ್ ಡೌನ್ ಘೋಷಿಸಲಾಗಿದೆ. ಮೇ 31ಕ್ಕೆ 4ನೇ ಲಾಕ್ ಡೌನ್ ಅಂತ್ಯವಾಗಬೇಕಿದೆ. ಆದರೆ, ಕೊರೋನಾ ವೈರಾಸ್ ಸೋಂಕು ಪ್ರಕರಣಗಳ ಹರಡುವ ವೇಗ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇನ್ನೂ 2ವಾರ ಲಾಕ್ ಡೌನ್ ವಿಸ್ತರಿಸುವ ಚಿಂತನೆಯಲ್ಲಿದೆ. ಜೂನ್ 15ರವರೆಗೂ ದಿಗ್ಬಂಧನ ಕ್ರಮ ಮುಂದುವರಿಯಬಹುದು ಎಂದು ಮೂಲಗಳು ವರದಿ ಮಾಡಿದೆ.

Also Read  ತಾ. ಜಿ.ಪಂ ಚುನಾವಣೆ..! ➤ ಏಪ್ರಿಲ್ 1ರೊಳಗೆ ಮೀಸಲು ಪ್ರಕಟ

 

 

 

 

 

 

error: Content is protected !!
Scroll to Top