ಸುಳ್ಯ: ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ➤ ಆಸ್ಪತ್ರೆಯ ಹಾದಿ ಮಧ್ಯೆ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.26. ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಉಂಟಾದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ಪೊಲೀಸ್ ಠಾಣಾ ಮುಂಭಾಗದಲ್ಲಿ ಮಂಗಳವಾರದಂದು ನಡೆದಿದೆ.

ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಕೇನಾಜೆ ನಿವಾಸಿ ಪೋಕರ್ ಕುಂಞಿ(55) ಎಂದು ಗುರುತಿಸಲಾಗಿದೆ. ಪೋಕರ್ ಕುಂಞಿ ಮಂಗಳವಾರದಂದು ತನ್ನ ಕಾರಿನಲ್ಲಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ ಕಾರು ಸ್ಕೂಟಿಯೊಂದಕ್ಕೆ ತಾಗಿ ಮುಂದಕ್ಕೆ ಬಂದು‌ ಮತ್ತೊಂದು ಕಾರಿಗೆ ತಾಗಿ ನಿಂತಿದೆ. ಅವರು ಕಾರಿನ ಸ್ಟೇರಿಂಗ್ ಗೆ ತಲೆ ತಗ್ಗಿಸಿ ಬಿದ್ದುದನ್ನು ನೋಡಿದ ಸ್ಥಳೀಯರು ತಕ್ಷಣವೇ ಕಾರಿನ ಡೋರ್ ತೆಗೆದು ಹ್ಯಾಂಡ್ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಿ ಪೋಕರ್ ರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

Also Read  ಕಡಬ: ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹಣ್ಣು ಹಂಪಲು ವಿತರಿಸಿದ ಬಿಜೆಪಿ ಮುಖಂಡರು

error: Content is protected !!