(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್, ಮೇ26: ಇಡೀ ಮನುಕುಲಕ್ಕೆ ಮಾರಕವಾಗಿರುವ ಕೊರೋನಾ ವೈರಾಣು ಕೊವೀಡ್ -19 ತಡೆಗಟ್ಟವ ಸಲುವಾಗಿ ಲಸಿಕೆ ಕಂಡು ಹಿಡಿಯಲು ಸಮರೋಪಾದಿಯಲ್ಲಿ ವಿವಿಧ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಜಗತ್ತಿನೆಲ್ಲೆಡೆ ನೂರಾರೂ ಸಾವಿರಾರು ಸಂಶೋಧನೆ ಹಾಗೂ ವಿವಿಧ ರೀತಿಯಲ್ಲಿ ಅಧ್ಯಯನಗಳು ನಡೆಯುತ್ತಿದೆ.
ಈಗ ನ್ಯೂರ್ಯಾಕ್ ನಿಂದ ಬಂದ ಮಾಹಿತಿ ಪ್ರಕಾರ, ಕೊರೋನಾ ಲಸಿಕೆಯನ್ನ ಮಾನವರ ಮೇಲೆ ಪ್ರಯೋಗವನ್ನು ಈಗಾಗಲೇ ಆರಂಭಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಕೊರೋನಾ ಲಸಿಕೆಯ ಮೊದಲ ಮಾದರಿಯನ್ನ ಮಂಗನ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಕೋವಿಡ್ ತಡೆಯಲು ಯಶಸ್ವಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇನ್ನು ಮುಖ್ಯವಾಗಿ ಕೊರೋನಾ ವೈರಾಸ್‍ಗೆ ಲಸಿಕೆ ಕಂಡು ಹಿಡಿಯಲು ಶತಯಾಗತಾಯ ಪ್ರಯತ್ನಗಳು ನಡೆಯುತ್ತಿದೆ. ಹಲವಾರು ರಾಷ್ಟ್ರಗಳ ನಡುವೆ ಈಗಾಗಲೇ ನಿಕಟ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಕೋತಿಗಳ ಮೇಲೆ ಕೊರೋನಾ ಲಸಿಕೆ ಪ್ರಯೋಗವು ನಡೆಸಲಾಗಿದೆ.