ರಾಜ್ಯದಲ್ಲಿ ಇಂದು 216 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆ

ಬೆಂಗಳೂರು, ಮೇ 23. ರಾಜ್ಯದಲ್ಲಿ ಮೇ 22ರ ಸಂಜೆ 5ರಿಂದ ಮೇ 23ರ ಸಂಜೆ 5ರವರೆಗೆ 216 ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಕ್ಯೆ 1,959ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 4, ಮಂಡ್ಯದಲ್ಲಿ 28, ಕಲಬುರಗಿ 1, ಬೆಳಗಾವಿ 1, ದಾವಣಗೆರೆ 3, ಚಿಕ್ಕಬಳ್ಳಾಪುರ 26, ಯಾದಗಿರಿ 72, ಹಾಸನ 4, ಬೀದರ್ 3, ಉತ್ತರ ಕನ್ನಡ 2, ರಾಯಚೂರು 40, ದಕ್ಷಿಣ ಕನ್ನಡ 3, ಉಡುಪಿ 3, ಧಾರವಾಡ 5, ಗದಗ 15, ಬಳ್ಳಾರಿ 3 ಮತ್ತು ಕೋಲಾರದಲ್ಲಿ 3 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದಾಗಿ ಇಂದು ಓರ್ವ ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನ ಸೋಂಕಿನಿಂದಾಗಿ ಸಾವಿನ ಸಂಖ್ಯೆ 42 ಆಗಿದೆ. ಇದುವರೆಗೆ ಒಟ್ಟು 608 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 1,307 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ದೇರಳಕಟ್ಟೆಯಲ್ಲಿ 1.236 ಗ್ರಾಂ ಹೈಡೋವೀಡ್ ಗಾಂಜಾ ವಶಕ್ಕೆ ➤ ವೈದ್ಯ ವಿದ್ಯಾರ್ಥಿನಿ ಸಹಿತ ಇಬ್ಬರ ಬಂಧನ

error: Content is protected !!
Scroll to Top