ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳ ಬಾಡಿಗೆ ಮನ್ನಾ ಮಾಡಿದ ಕಡಬದ ಕಟ್ಟಡ ಮಾಲಕ ➤ 55 ಅಂಗಡಿಗಳ 2.5 ಲಕ್ಷ ಬಾಡಿಗೆ ಮನ್ನಾ ಮಾಡಿ ಮಾನವೀಯತೆ



(ನ್ಯೂಸ್ ಕಡಬ) newskadaba.com ಕಡಬ, ಮೇ.11. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಂಕಷ್ಟಕ್ಕೀಡಾಗಿದ್ದ ಅಂಗಡಿ ಮಾಲಕರಿಗೆ ನೆರವಾಗುವ ಉದ್ದೇಶದಿಂದ ಕಡಬದ ಕಟ್ಟಡ ಮಾಲಕರೋರ್ವರು ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿ ಮಾನವೀಯತೆ ಮೆರೆದಿದ್ದಾರೆ.







ಕಡಬದ ಶ್ರೀರಾಮ್ ಟವರ್ಸ್ ಮತ್ತು ಓಂಕಾರ್ ಟವರ್ಸ್ ನ ಮಾಲಕರಾದ ಕೇಪು ಶಿವರಾಮ ಶೆಟ್ಟಿ ಹಾಗೂ ಕೃಷ್ಣ ಶೆಟ್ಟಿ ಅವರು ತಮ್ಮ ಮಾಲಕತ್ವದ ವಾಣಿಜ್ಯ ಸಂಕೀರ್ಣದ ಒಟ್ಟು 55 ಅಂಗಡಿ ಕೊಠಡಿಗಳ ಬಾಡಿಗೆದಾರರಿಗೆ ಕೊರೊನಾ ಲಾಕ್ ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಬಾಡಿಗೆ ಸುಮಾರು 2 ಲಕ್ಷದ 50 ಸಾವಿರ ರೂ.ವನ್ನು ಮನ್ನಾ ಮಾಡಿ ಮಾನವೀಯತೆ ಮೆರೆದಿದ್ದಾರೆ.






error: Content is protected !!
Scroll to Top