ರಾಜ್ಯದಲ್ಲಿ ಇಂದು 48 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆ

ಬೆಂಗಳೂರು, ಮೇ 8: ರಾಜ್ಯದಲ್ಲಿ ಇಂದು ಹೊಸದಾಗಿ 48 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 753ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಳಗಾವಿಯ 11 ಮಂದಿ, ದಾವಣೆಗೆರೆಯ 14 ಮಂದಿ, ಬೆಂಗಳೂರಿನ 7 ಮಂದಿ ಚಿತ್ರದುರ್ಗ 3 ಮಂದಿ, ಉತ್ತರ ಕನ್ನಡ 12 ಮಂದಿ ಹಾಗೂ ಬಳ್ಳಾರಿಯಲ್ಲಿ ಓರ್ವನಿಗೆ ಕೊರೋನ ಸೋಂಕು ದೃಢಪಟ್ಟಿದೆ. 753 ಮಂದಿ ಸೋಂಕಿತರ ಪೈಕಿ 376 ಮಂದಿ ಸೋಂಕಿನಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ 30 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.

Also Read  ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾಗೆ ನಕ್ಸಲ್ ನಂಟು: ಸಿಎಂ ಯಡಿಯೂರಪ್ಪ

error: Content is protected !!
Scroll to Top