(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.05. ಮಂಗಳವಾರ ಬೆಳ್ಳಂಬೆಳಗ್ಗೆ ಮಂಗಳೂರು ನಗರವನ್ನು ಸುತ್ತಾಡಿ ನಗರ ವಾಸಿಗಳನ್ನು ಬೆಚ್ಚಿಬೀಳಿಸಿದ್ದ ಕಾಡುಕೋಣವನ್ನು ಅರಣ್ಯಾಧಿಕಾರಿಗಳು ಅರಿವಳಿಕೆ ನೀಡಿ ಹಿಡಿಯಲಾಗಿತ್ತು.
ನಗರದಲ್ಲಿ ಹಿಡಿದ ಕಾಡಕೋಣವನ್ನು ದೂರದ ಚಾರ್ಮಾಡಿ ಘಾಟ್ ನಲ್ಲಿ ಬಿಡುವ ಸಿದ್ಧತೆ ನಡೆದಿದ್ದು, ಘಾಟಿಯ 9ನೇ ತಿರುವಿನಲ್ಲಿ ಬಿಡಲಾಗಿತ್ತು. ಆದರೆ ಬೆಳಿಗ್ಗೆ ಕಾಡಕೋಣವನ್ನು ಹಿಡಿಯುವ ಆಪರೇಷನ್ ಸಕ್ಸಸ್ ಆಗಿತ್ತಾದರೂ ಸಂಜೆ ಘಾಟಿಯಲ್ಲಿ ಬಿಟ್ಟ ನಂತರ ಮಾತ್ರ ಕಾಡುಕೋಣ ನಿಗೂಢವಾಗಿ ಸಾವನ್ನಪ್ಪಿದೆ ಎಂಬ ಮಾಹಿತಿಯು ಕೇಳಿ ಬರುತ್ತಿದೆ. ಅರಿವಳಿಕೆ ಮದ್ದಿನ ಪ್ರಮಾಣ ಹೆಚ್ಚಾಗಿ ಅರಣ್ಯಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾಡುಕೋಣ ಸಾವನ್ನಪ್ಪಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.