(ನ್ಯೂಸ್ ಕಡಬ) newskadaba.com ಕಡಬ, ಆ.31. ನೂಜಿಬಾಳ್ತಿಲ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ವಲಯಮಟ್ಟದ ಚದುರಂಗ ಆಟದಲ್ಲಿ ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
17ರ ವಯೋಮಿತಿಯಲ್ಲಿ ನಡೆದ ಚದುರಂಗ ಆಟದಲ್ಲಿ ದಿಲೀಪ್ ಕುಮಾರ್ ಆರ್ 4ನೇ ಸ್ಥಾನ, ಜಿತೇಶ್ ಕುಮಾರ್.ಎಸ್ 5ನೇ ಸ್ಥಾನ ಪಡೆದುಕೊಂಡಿರುತ್ತಾರೆ. 14ರ ವಯೋಮಿತಿಯಲ್ಲಿ ಅಭಿನವ್ ಪಿ.ಎಸ್ ಪ್ರಥಮ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಮನೀಶ್ ರೈ ದ್ವಿತೀಯ ಸ್ಥಾನ, ಹುಡುಗಿಯರ ವಿಭಾಗದಲ್ಲಿ ಸುಧಾ ಕೋಟೆ ಪ್ರಥಮ, ಸೌಜನ್ಯ ಎಂ.ಕೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಸಂಸ್ಥೆಯ ಸಂಚಾಲಕ ರೆ|ಫಾ| ರೋನಾಲ್ಡ್ ಲೋಬೋ, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಧಾ ಕುಮಾರಿ, ಶಿಕ್ಷಕಿ ಕುಸುಮಾವತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ದಕ್ಷ, ಶಾರೀರಿಕ ಶಿಕ್ಷಕ ಸಮದ್ ಮಕ್ಕಳನ್ನು ಅಭಿನಂದಿಸಿದರು.