ವಿಶ್ವದಲ್ಲಿ ಕೊರೋನಗೆ 2.25 ಲಕ್ಷ ಮಂದಿ ಬಲಿ, 31.8 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ಲಂಡನ್, ಎ.30: ವಿಶ್ವದೆಲ್ಲೆಡೆ ಕೊರೋನ ವೈರಸ್ ರಣಕೇಕೆ ಹಾಕುತ್ತಿದ್ದು, ಮಹಾಮಾರಿಗೆ ವಿವಿಧ ರಾಷ್ಟ್ರಗಳಲ್ಲಿ 2.25 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 31.8 ಲಕ್ಷ ಮಂದಿ ಸೋಂಕಿಗೊಳಗಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 7,708 ಮಂದಿ ಬಲಿಯಾಗಿದ್ದು, ಹೊಸದಾಗಿ 49,950 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 31,86,458ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 2,26,000ಕ್ಕೆ ಏರಿಕೆಯಾಗಿದೆ.

ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೆರಿಕಾ ಒಂದೇ ರಾಷ್ಟ್ರದಲ್ಲಿ ಈ ವರೆಗೂ 60,853 ಬಲಿಯಾಗಿದ್ದಾರೆ. ಅಲ್ಲದೆ, 10,48,800 ಮಂದಿಯಲ್ಲಿ ಸೋಂಕು ಕಾಣಸಿಕೊಂಡಿದೆ.

Also Read  ಬಾಹ್ಯಾಕಾಶದಿಂದ ಮತ ಚಲಾಯಿಸಲಿರುವ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಪ್ರಾನ್ಸ್ ‌ನಲ್ಲಿ ಹೊಸದಾಗಿ ಕಳೆದ 24 ಗಂಟೆಗಳ್ಲಲಿ 5 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ವರೆಗೂ ಆ ರಾಷ್ಟ್ರದಲ್ಲಿ 2,36,890 ಮಂದಿ ಸೋಂಕಿಗೊಳಗಾಗಿದ್ದಾರೆ.

ಇಟಲಿಯಲ್ಲಿ 2,03,591 ಮಂದಿಯಲ್ಲಿ, ಫ್ರಾನ್ಸ್ ನಲ್ಲಿ 1,65,911, ಜರ್ಮನಿಯಲ್ಲಿ 1,60,400, ಬ್ರಿಟನ್ ನಲ್ಲಿ 1,65,221 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

error: Content is protected !!
Scroll to Top