ಗೋಳಿಯಡ್ಕ ಧರ್ಮಶಿಖರದಲ್ಲಿ ಗಣೇಶೋತ್ಸವ ಸಂಭ್ರಮ ► ಶೋಭಾಯಾತ್ರೆ

(ನ್ಯೂಸ್ ಕಡಬ) newskadaba.com ಕಡಬ, ಆ.31. ರೆಂಜಿಲಾಡಿ ನೂಜಿಬಾಳ್ತಿಲ ಗ್ರಾಮದ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 21ನೇ ವರ್ಷದ ಶ್ರೀ ಗಣೇಶೋತ್ಸವ ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದಲ್ಲಿ ನಡೆಯಿತು.


ಬೆಳಿಗ್ಗೆ ಸುಪ್ರಭಾತ, ಗಣಹೋಮ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಟೆ, ಭಜನಾಕಾರ್ಯಕ್ರಮ ನಡೆದು ಬಳಿಕ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಂಜೆ ಓಕುಳಿ ಏಲಂ ಬಳಿಕ ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದ ಎದುರು ಅಶ್ವಥ ಕಟ್ಟೆಯಲ್ಲಿ ಶ್ರೀದೇವರ ಪೂಜೆ ನಡೆಸಲಾಯಿತು.

ಗೋಳಿಯಡ್ಕದಿಂದ ಆರಂಭಗೊಂಡ ಶ್ರೀ ದೇವರ ವಿಗ್ರಹದ ಶೋಭಾಯಾತ್ರೆಗೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬೆಳ್ತಂಗಡಿಯ ಅಜೇಯ್ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಕೇಪು ಹಳ್ಳದಲ್ಲಿ ದೇವರ ಜಲಸ್ಥಂಭನ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಧರ್ಮಶಿಖರದ ಧರ್ಮದರ್ಶಿ ರವೀಂದ್ರ ಗುರುಸ್ವಾಮಿ, ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್, ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಪದಕ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಡೀಕಯ್ಯ ಗೌಡ ಪಾಡ್ಲ, ಉಪಾಧ್ಯಕ್ಷ ಹರೀಶ್ಚಂದ್ರ ಕನ್ವಾರೆ, ಜೊತೆಕಾರ್ಯದರ್ಶಿ ಗುರುಪ್ರಸಾದ್ ಗರ್ಗಸ್ಪಾಲ್ ಮೊದಲಾದವರು ಇದ್ದರು.

error: Content is protected !!
Scroll to Top