ಇಂದು ಮಧ್ಯರಾತ್ರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ

  • ಕಂಟೈನ್ಮೆಂಟ್ ರೆನ್‌ನಲ್ಲಿ ಯಥಾಸ್ಥಿತಿ ಮುಂದುವರಿಕೆ

ಬೆಂಗಳೂರು, ಎ.22: ರಾಜ್ಯಾದ್ಯಂತ ಇಂದು ಮಧ್ಯರಾತ್ರಿಯಿಂದ ಲಾಕ್‌ಡೌನ್ ಸಡಿಲಗೊಳಿಸಿ, ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯ ಅನುಸಾರ ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂದಲೇ ಲಾಕ್‌ಡೌನ್ ಸಡಿಲಗೊಳಿಸಲಾಗುತ್ತಿದೆ. ಆದರೆ ಕಂಟೈನ್ಮೆಂಟ್ ರೆನ್‌ಗಳಲ್ಲಿ ಈಗ ಇರುವಂತ ಲಾಕ್‌ಡೌನ್ ಹಾಗೆಯೇ ಮುಂದುವರಿಯಲಿದೆ.

ಅಂತರ್ ಜಿಲ್ಲೆಯ ಸಂಚಾರವಾಗಲಿ, ದ್ವಿಚಕ್ರ ವಾಹನದಲ್ಲಿ ಓಡಾಟಕ್ಕೆ ಅಥವಾ ಸಾರಿಗೆ ಸಂಚಾರವಾಗಲಿ ಆರಂಭಕ್ಕೆ ಅನುಮತಿ ಇಲ್ಲ. ಗ್ಯಾರೇಜ್, ಡಾಬಾ, ಕೊರಿಯರ್ ಸೇವೆ, ಪ್ಲಂಬರ್, ಎಲೆಕ್ಟ್ರೀಶಿಯನ್, ಬಡಗಿ, ಕೇಬಲ್ ಹಾಗೂ ಡಿಟಿಎಚ್ ಆಪರೇಟರ್, ಅಗತ್ಯ ವಸ್ತುಗಳ ಆನ್‌ಲೈನ್ ಡೆಲಿವರಿ, ಆಹಾರ ಸಂಸ್ಕರಣಾ ಘಟಕ ಆರಂಭಕ್ಕೆ ಅನುಮತಿ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಕೃಷಿ ವಲಯ ಮೀನುಗಾರಿಕೆ ವಲಯಗಳಿಗೆ ಸಂಬಂಧಿಸಿದಂತೆ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಕಂಟೈನ್ಮೆಂಟ್ ರೆನ್‌ಗೆ ಇದ್ಯಾವುದೇ ನಿಯಮ ಅನ್ವಯಿಸುವುದಿಲ್ಲ.

ಇನ್ನು ಬಸ್ ಸಂಚಾರ, ಮೆಟ್ರೊ, ಆಟೊ, ಕ್ಯಾಬ್, ರೈಲು, ಮದ್ಯ ಮಾರಾಟ, ಧಾರ್ಮಿಕ ಸಭೆ ಸಮಾರಂಭ, ಚಿತ್ರಮಂದಿರ ಮಾಲ್, ಐಟಿ-ಬಿಟಿ, ವಲಯ, ಶಾಲಾ-ಕಾಲೇಜುಗಳಿಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಸರಕಾರದ ಮಾರ್ಗಸೂಚಿಯಲ್ಲಿ ತಿಳಿಸಿದೆ.

error: Content is protected !!

Join the Group

Join WhatsApp Group